ನಟಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಸಹ ನಟನ ವಿರುದ್ಧ ದೂರು ದಾಖಲು
ಐಸ್ ಮಹಲ್ ಎಂಬ ಚಿತ್ರದ ನಟಿಗೆ ಅದೇ ಚಿತ್ರದ ಪೋಷಕ ನಟ ರಾಜಶೇಖರ ಎಂಬುವವರು ಕನ್ಯತ್ವ ಪರೀಕ್ಷಿಸಿಕೊಳ್ಳುವಂತೆ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ. ಮೆಸೇಜ್ ಕಳುಹಿಸುವ ಮೂಲಕ ತಮ್ಮ ಚಾರಿತ್ರ್ಯದ ಬಗ್ಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ನಟಿ ಆರೋಪ ಮಾಡಿದ್ದಾರೆ. ಚಿತ್ರದಲ್ಲಿ ರಾಜಶೇಖರ್ ನಟಿಯ ತಂದೆಯ ಪಾತ್ರ ನಿರ್ವಹಿಸಿದ್ದಾರೆ.
ಚಿತ್ರ ನಟಿಯೊಬ್ಬರಿಗೆ ಪೋಷಕ ನಟರೊಬ್ಬರು ಅಸಭ್ಯ ಸಂದೇಶ ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ನಟಿ ದೂರು ದಾಖಲಿಸಿದ್ದು, ಐಪಿಸಿ 354 D, 504, 506, 509 ಅಡಿ ಪೊಲೀಸರು ದಾಖಲಿಸಿದ್ದಾರೆ.
Comments