ಮೇನಲ್ಲಿ ಮೊದಲ ಹಳೆಗನ್ನಡ ಸಾಹಿತ್ಯ ಸಮ್ಮೇಳನ

ಪ್ರಥಮ ಅಖಿಲ ಭಾರತ ಹಳೆಗನ್ನಡ ಸಾಹಿತ್ಯ ಸಮ್ಮೇಳನವನ್ನು ಶ್ರವಣಬೆಳಗೊಳದಲ್ಲಿ ಮುಂದಿನ ವರ್ಷ ಆಯೋಜಿಸಲಾಗುವುದು ,ಸಾಹಿತಿ ಜಿನದತ್ತ ದೇಸಾಯಿ ಸಮ್ಮೇಳನಾಧ್ಯಕ್ಷರು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್ ಹೇಳಿದ್ದಾರೆ
ಸಮ್ಮೇಳನದ ಬಗ್ಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಜತೆ ಚರ್ಚಿಸಿ ಮೇ ನಲ್ಲಿ ಆಯೋಜಿಸಲಾಗುವುದು. ನವೆಂಬರ್ ನಲ್ಲಿ ಇದನ್ನು ನಡೆಸಬೇಕಿತ್ತು. ಆದರೆ ಮೈಸೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆದ ಕಾರಣ ಆಗಲಿಲ್ಲ ಎಂದರು.ಭಕ್ತರ ಕೋರಿಕೆಯಂತೆ ಭರತೇಶ ವೈಭವ ಗ್ರಂಥವನ್ನು ಕ.ಸಾ.ಪ ವತಿಯಿಂದ ಮರು ಮುದ್ರಣ ಮಾಡಲಾಗಿದೆ. ಅದೇ ರೀತಿ ಇನ್ನು ಎರಡು ಗ್ರಂಥ ಗಳನ್ನು ಆದಷ್ಟು ಬೇಗ ಮರು ಮುದ್ರಣ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.ಇದಕ್ಕೂ ಮುನ್ನ ಸಮ್ಮೇಳನ ಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು.
Comments