ಕೆಎಸ್‌ಆರ್ ಟಿಸಿ ನಿವೃತ್ತ ನೌಕರರಿಗೆ ಗುಡ್ ನ್ಯೂಸ್
ಎಲ್ಲಾ ನಾಲ್ಕು ಸಾರಿಗೆ ನಿಗಮಗಳ ನಿವೃತ್ತ ನೌಕರರ ಪತ್ನಿಯರಿಗೆ ರಾಜ್ಯ ಸರ್ಕಾರ ಬಸ್ ಪಾಸ್ ನೀಡಲಿದೆ. ವರ್ಷಕ್ಕೆ 500 ರೂಪಾಯಿ ನೀಡಿದರೆ ಅವರು ರಾಜ್ಯದ ಯಾವುದೇ ಭಾಗದಲ್ಲಿ ಸಾಮಾನ್ಯ ಮತ್ತು ಎಕ್ಸ್ ಪ್ರೆಸ್ ಬಸ್ ನಲ್ಲಿ ಕಾಯ್ದಿರಿಸದ ಸೀಟಿನಲ್ಲಿ ಪ್ರಯಾಣಿಸಬಹುದು.
ಬಸ್ಸಿನ ಪ್ರಯಾಣ ದರದ ಶೇಕಡಾ 50 ಭಾಗ ನೀಡಿ ಸಾರಿಗೆ ನಿಗಮದ ಅಧಿಕಾರಿಗಳು ಮತ್ತು ಅವರ ಪತ್ನಿ ಪ್ರಮುಖ ಸೇವೆಗಳ ಬಸ್ಸುಗಳಲ್ಲಿ ಪ್ರಯಾಣಿಸಬಹುದಾಗಿದೆ. ಮುಖ್ಯಮಂತ್ರಿಗಳ ಶಿಫಾರಸಿನಂತೆ ರಾಜ್ಯ ರಸ್ತೆ ಸಾರಿಗೆ ನಿಗಮದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಮಂಡ್ಯ ಜಿಲ್ಲೆಯ ಜಕ್ಕನಹಳ್ಳಿಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ 2 ಎಕರೆ ಮತ್ತು ಚಿತ್ರದುರ್ಗ ಜಿಲ್ಲೆಯ ಹೊಳಕೆರೆಯಲ್ಲಿ ಬಸ್ ನಿಲ್ದಾಣಕ್ಕೆ 1 ಎಕರೆ ಭೂಮಿಯನ್ನು ಪಡೆಯುವ ಕುರಿತು ಕೂಡ ನಿರ್ಧರಿಸಲಾಯಿತು. ಜನವರಿ 4ರಿಂದ ಪುದುಚೆರಿಗೆ ಕೆಎಸ್ ಆರ್ ಟಿಸಿ ಹೊಸ ರಾಜಹಂಸ ಬಸ್ಸುಗಳ ಸೇವೆಯನ್ನು ಆರಂಭಿಸಲಿದೆ. ಇಲ್ಲಿಗೆ ಪ್ರಯಾಣ ದರವನ್ನು 410 ಎಂದು ನಿಗದಿಪಡಿಸಲಾಗಿದ್ದು ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ಬಸ್ ಹೊರಡಲಿದೆ.
Comments