ಹುಟ್ಟು ಹಬ್ಬದಂದು ಬಂದೆರೆಗಿತ್ತು ಸಾವು
ನಿನ್ನೆ ಮಧ್ಯರಾತ್ರಿ ಖುಷ್ಬು ಬನ್ಸಾಲಿಯ 28ನೇ ಹುಟ್ಟುಹಬ್ಬ ಆಚರಣೆಗೆ ತಯಾರಿ ನಡೆದಿತ್ತು. ಖುಷ್ಬುಳ ಪತಿ, ಕುಟುಂಬ ಸದಸ್ಯರೆಲ್ಲ ಮುಂಬೈನ 'ವನ್ ಅಬೌವ್ ಲಾಂಜ್ & ಪಬ್' ನಲ್ಲಿ ಬರ್ತಡೇ ಸೆಲೆಬ್ರೇಷನ್ ಗೆ ಬಂದಿದ್ರು. ಅದಾಗಿ ಒಂದು ಗಂಟೆ ಕಳೆಯುಷ್ಟರಲ್ಲಿ ಖುಷ್ಬು ಬೆಂಕಿ ದುರಂತದಲ್ಲಿ ಬಲಿಯಾಗಿದ್ದಾಳೆ.
ರಾತ್ರಿ ಸುಮಾರು 12.30 ರ ವೇಳೆಗೆ ರೆಸ್ಟೋರೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹುಟ್ಟುಹಬ್ಬದ ಖುಷಿಯಲ್ಲಿದ್ದ ಖುಷ್ಬು ಸುಟ್ಟು ಕರಕಲಾಗಿದ್ದಾಳೆ. ಈ ದುರ್ಘಟನೆಯಲ್ಲಿ 11 ಮಹಿಳೆಯರು ಸೇರಿದಂತೆ 14 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಮಲಾ ಮಿಲ್ ಕಾಂಪೌಂಡ್ ನಲ್ಲಿರೋ ರೆಸ್ಟೋರೆಂಟ್ ನ ಕೊನೆಯ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಈ ದುರಂತ ಸಂಭವಿಸಿದೆ. ಖುಷ್ಬುಳ ಪತಿ ಪಾರ್ಟಿ ಅರೇಂಜ್ ಮಾಡಿದ್ದ. ಸುಮಾರು 20-25 ಮಂದಿ ಬರ್ತಡೇ ಪಾರ್ಟಿಗಾಗಿ ಬಂದಿದ್ರು. ಆದ್ರೆ ಬೆಂಕಿ ಅನಾಹುತದಲ್ಲಿ ಖುಷ್ಬು ಸೇರಿ ಇಬ್ಬರು ಸಜೀವ ದಹನವಾಗಿದ್ದಾರೆ.
ಇದ್ದಕ್ಕಿದ್ದಂತೆ ರೆಸ್ಟೋರೆಂಟ್ ನಲ್ಲಿ ಸ್ಫೋಟದ ಸದ್ದು ಕೇಳಿಸಿತ್ತು. ಎಲ್ಲರೂ ಭಯದಿಂದ ದಿಕ್ಕಾಪಾಲಾಗಿ ಓಡಿದ್ರು. ಖುಷ್ಬು ಪತಿ ಜಯೇಶ ಕೂಡ ಕೆಳಮಹಡಿಗೆ ಓಡಿ ಬಂದಿದ್ದ. ಆದ್ರೆ ಖುಷ್ಬೂ ಬಂದಿಲ್ಲ ಅನ್ನೋದು ಗೊತ್ತಾಗ್ತಿದ್ದಂತೆ ಅವಳನ್ನು ಹುಡುಕಲು ಬಂದಿದ್ದಾನೆ. ಎಷ್ಟು ಹುಡುಕಿದ್ರೂ ಖುಷ್ಬೂ ಪತ್ತೆಯಾಗಲಿಲ್ಲ. ಬಳಿಕ ಶೌಚಾಲಯದಲ್ಲಿ ಅವಳ ಶವ ಸಿಕ್ಕಿದೆ. ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಅಂತಾನೂ ಹೇಳಲಾಗ್ತಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ಖುಷ್ಬು ಬದುಕುತ್ತಿದ್ಲು ಅಂತಾ ಸಂಬಂಧಿಕರು ಹೇಳಿದ್ದಾರೆ.
Comments