ಇಂದು ವೈಕುಂಠ ಏಕಾದಶಿಯ ನಾಡಿನೆಲ್ಲೆಡೆ ಸಂಭ್ರಮ ಸಡಗರ

ವೈಕುಂಠ ಏಕಾದಶಿಯ ದಿನವಾದ ಇಂದು ನಾಡಿನೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ವೈಕುಂಠ ದ್ವಾರದ ಮೂಲಕ ವೆಂಕಟೇಶ್ವರನ ದರ್ಶನ ಮಾಡಿದರೆ, ಸ್ವರ್ಗದ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ವೆಂಕಟೇಶ್ವರನ ದೇವಾಲಯಗಳು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ವಿಷ್ಣು ಉತ್ತರ ದ್ವಾರದ ಮೂಲಕ ದರ್ಶನ ನೀಡಿದ ವೈಕುಂಠ ಏಕಾದಶಿಯಂದು ಸ್ವಾಮಿಯ ದರ್ಶನ ಪಡೆದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.
ಮಧ್ಯರಾತ್ರಿಯಿಂದಲೇ ಭಕ್ತರು ದೇವರ ದರ್ಶನ ಪಡೆದುಕೊಂಡಿದ್ದಾರೆ. ದೇವರ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರ ಆಗಮನದ ಹಿನ್ನಲೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಉತ್ತರ ದ್ವಾರವನ್ನು ಸ್ವರ್ಗದ ಬಾಗಿಲು ಎಂದು ಕರೆಯಲಾಗುತ್ತದೆ. ಹಲವು ದೇವಾಲಯಗಳಲ್ಲಿ ದ್ವಾರ ನಿರ್ಮಿಸಲಾಗಿದ್ದು, ಇಲ್ಲಿಂದ ಪ್ರವೇಶಿಸಿ ಭಕ್ತರು ದೇವರ ದರ್ಶನ ಪಡೆದಿದ್ದಾರೆ. ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ ಮಾಡಲಾಗಿದೆ. ತಿರುಪತಿ, ತಿರುಮಲ, ವೆಂಕಟೇಶ್ವರ, ವಿಷ್ಣು ಮೊದಲಾದ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಕೆಲವು ದೇವಾಲಯಗಳಲ್ಲಿ ತಿರುಪತಿಯಿಂದ ವಿಶೇಷ ಲಡ್ಡು ತರಿಸಿ ವಿತರಿಸಲಾಗಿದೆ. ಎಲ್ಲಾ ದೇವಾಲಯಗಳಲ್ಲಿಯೂ ಭಕ್ತರ ದಂಡೇ ನೆರೆದಿದ್ದು, ದೇವಾಲಯ ಆಡಳಿತ ಮಂಡಳಿಯವರು ಸಕಲ ವ್ಯವಸ್ಥೆ ಮಾಡಿದ್ದಾರೆ.
Comments