ರಾಷ್ಟ್ರ ಕವಿ ಕುವೆಂಪು ರವರಿಗೆ ಜನ್ಮ ದಿನಾಚರಣೆ ಪ್ರಯುಕ್ತ ಗೂಗಲ್ ಗೌರವ

ವಿಶೇಷ ದಿನ, ಘಟನೆ, ಸಾಧನೆ, ಸಾಧಕರ ಜನ್ಮದಿನ ಮೊದಲಾದ ಸಂದರ್ಭಗಳಲ್ಲಿ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸುತ್ತದೆ. ಮುಖಪುಟದಲ್ಲಿ ಸಾಧಕರ ಚಿತ್ರವನ್ನು ಪ್ರಕಟಿಸಲಾಗುತ್ತದೆ. ಅದೇ ರೀತಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಪ್ರಯುಕ್ತ ಗೂಗಲ್ ಮಲೆನಾಡಿನ ಪರಿಸರದ ಹಿನ್ನಲೆಯಲ್ಲಿ ಕುವೆಂಪು ಕುಳಿತಿರುವ ಚಿತ್ರವನ್ನು ಪ್ರಕಟಿಸಿದೆ. ಕನ್ನಡದಲ್ಲಿಯೇ ಗೂಗಲ್ ಎಂದು ಬರೆಯಲಾಗಿದೆ.
ಕುವೆಂಪು ಅವರ ಮೆಚ್ಚಿನ ತಾಣವಾದ ಸಿಬ್ಬಲುಗುಡ್ಡೆ, ತುಂಗಾ ನದಿಯ ನಡುವಿನ ಬಂಡೆ, ಕಾಜಾಣ, ಹಸಿರಿನ ನಡುವೆ ಕುಳಿತಿರುವ ಕುವೆಂಪು ಚಿತ್ರವನ್ನು ಪ್ರಕಟಿಸುವ ಮೂಲಕ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಬರೆದಿದ್ದಾರೆ. ಅವರಿಗೆ ಡೂಡಲ್ ಮೂಲಕ ಗೂಗಲ್ ಗೌರವ ಸಲ್ಲಿಸಿದ್ದು, ಕನ್ನಡದಲ್ಲೇ ಗೂಗಲ್ ಎಂದು ಬರೆಯಲಾಗಿದೆ.
Comments