ವೈಕುಂಠ ಏಕಾದಶಿಗೆ ಲಾಡು ವಿತರಿಸಲಿರುವ ಜೆಡಿಎಸ್ ನ ಟಿ.ಎ.ಶರವಣ

ಸಾಯಿ ಗೋಲ್ಡ್ ಪ್ಯಾಲೇಸ್ ನ ಮಾಲೀಕ ಹಾಗೂ ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಪ್ರತಿ ವರ್ಷದಂತೆ ಈ ಬಾರಿಯೂ ವೈಕುಂಠ ಏಕಾದಶಿಯಂದು ಲಾಡು ವಿತರಣೆ ಮಾಡಲಿದ್ದಾರೆ. ಬೆಂಗಳೂರಿನಲ್ಲಿರುವ ವಿವಿಧ ವೆಂಕಟೇಶ್ವರ ದೇವಾಲಯದಲ್ಲಿ ವಿತರಣೆ ಮಾಡುವ ಸಲುವಾಗಿಯೇ ಒಂದು ಲಕ್ಷ ಲಾಡು ತಯಾರು ಮಾಡಿಸಿದ್ದಾರೆ.
ವೆಂಕಟೇಶ್ವರನ ಮೇಲೆ ಅಪಾರ ಭಕ್ತಿ ಇರುವುದನ್ನು ಸಾರ್ವಜನಿಕವಾಗಿಯೇ ಹಲವು ಬಾರಿ ಹೇಳಿಕೊಂಡಿರುವ ಅವರು, ವೈಕುಂಠ ಏಕಾದಶಿ (ಈ ಸಲ ಡಿಸೆಂಬರ್ ಇಪ್ಪತ್ತೊಂಬತ್ತರಂದು, ಶುಕ್ರವಾರ ವೈಕುಂಠ ಏಕಾದಶಿ)ಯಂದು ವೆಂಕಟೇಶ್ವರನ ಆರಾಧನೆಗೆ ವಿಶೇಷ ಮಹತ್ವ ಇದೆ. ಇಂಥ ಸಮಯದಲ್ಲಿ ತಮ್ಮ ಭಕ್ತಿಯನ್ನು ದೇವರಿಗೆ ಸಮರ್ಪಿಸಲು ಶರವಣ ಕಂಡುಕೊಂಡಿರುವ ಮಾರ್ಗ ಇದು.ಈಚೆಗೆ ಬಸವನಗುಡಿಯಲ್ಲಿನ ತಮ್ಮ ಸಾಯಿ ಗೋಲ್ಡ್ ಪ್ಯಾಲೇಸ್ ಮಳಿಗೆ ಮೇಲಿರುವ ಸ್ಥಳದಲ್ಲಿ ಲಾಡು ತಯಾರಿ ಹಾಗೂ ವಿತರಣೆ ಕಾರ್ಯಕ್ಕೂ ಶರವಣ ಚಾಲನೆ ನೀಡಿದ್ದರು.
Comments