ಮಹದಾಯಿ ವಿಚಾರದಲ್ಲಿ ನಾವು ರಾಜೀ ಸಂಧಾನಕ್ಕೆ ಸಿದ್ಧವಿಲ್ಲ

ಕಾಂಗ್ರೆಸ್ -ಬಿ.ಜೆ.ಪಿ. ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ಉತ್ತರ ಕರ್ನಾಟಕದಲ್ಲಿ ಮಹದಾಯಿ ಹೋರಾಟ ಜೋರಾಗಿದ್ದು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದೇ ವೇಳೆ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್, ಮಹದಾಯಿ ವಿಚಾರದಲ್ಲಿ ನಾವು ರಾಜೀ ಸಂಧಾನಕ್ಕೆ ಸಿದ್ಧವಿಲ್ಲ ಎಂದು ಹೇಳಿದ್ದಾರೆ.
ಮಹದಾಯಿ ಯೋಜನೆಗಾಗಿ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅತ್ತ ಗೋವಾದಲ್ಲಿ ಬಿ.ಜೆ.ಪಿ. ನೇತೃತ್ವದ ಸರ್ಕಾರ ಕ್ಷಣ ಕ್ಷಣಕ್ಕೂ ಶಾಕ್ ನೀಡ್ತಿದೆ. ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮಾನವೀಯತೆ ದೃಷ್ಟಿಯಿಂದ ಕುಡಿಯುವ ನೀರಿಗೆ 7.5 ಟಿ.ಎಂ.ಸಿ. ಕೊಡಲು ಒಪ್ಪಿಗೆ ನೀಡುವುದಾಗಿ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಇದೇ ವಿಚಾರ ರಾಜಕೀಯಕ್ಕೆ ತಿರುಗಿದೆ.
Comments