ಮಹದಾಯಿ ಹೋರಾಟಕ್ಕೆ ಒಳ್ಳೆ ಹುಡ್ಗನ ಬೆಂಬಲ
ಮಹದಾಯಿ ನೀರಿಗಾಗಿ ಬಿಜೆಪಿ ಕಚೇರಿ ಮುಂದೆ ರೈತರು ನಡೆಸುತ್ತಿರುವ ಹೋರಾಟ ಮುಂದುವರೆದಿದೆ. ಈ ಮಧ್ಯೆ ಬಿಗ್‌ಬಾಸ್ ಸೀಸನ್ -04 ವಿನ್ನರ್ ಹಾಗೂ ನಟ ಪ್ರಥಮ್ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಸಂತೈಸಿದರು.
ಕೇವಲ ಯಡಿಯೂರಪ್ಪ ಬಂದರೆ ನಿಮ್ಮ ಸಮಸ್ಯೆ ಬಗೆಹರಿಯಲ್ಲ. ರೈತರ ಬಳಿ ಎಲ್ಲರೂ (ಮೂರು ಪಕ್ಷಗಳ ನಾಯಕರು) ಬರಬೇಕು. ಪ್ರಧಾನಿಗೆ ಒತ್ತಡ ಹೇರಬೇಕು. ಗೋವಾ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಪ್ರಥಮ್ ತಮ್ಮದೇ ಶೈಲಿಯಲ್ಲಿ ರೈತರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಹದಾಯಿ ಹೋರಾಟದಲ್ಲಿದ್ದ ಎಲ್ಲಾ ರೈತರಿಗೆ ಊಟ ಮಾಡಿಸಿದ್ದಲ್ಲದೆ, ಅವರನ್ನು ಸಂತೈಸಿದರು. ಅಲ್ಲದೆ, ಮಧ್ಯರಾತ್ರಿಯವರೆಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು
Comments