ಮಹದಾಯಿ ಹೋರಾಟದ ಬಗ್ಗೆ ಶಿವಣ್ಣ ಏನಂದ್ರು ?
ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಮಹದಾಯಿ ಹೋರಾಟ ಪಕ್ಷಾತೀತವಾಗಿ ನಡೆದರೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ. ನೆಲ,ಜಲ ಭಾಷೆ ವಿಷಯಗಳು ಅತ್ಯಂತ ಗಂಭೀರ ಮತ್ತು ಸೂಕ್ಷ್ಮವಾದವು. ಇಂತಹ ವಿವಾದಗಳು ಬಗೆಹರಿಸಿಕೊಳ್ಳಬೇಕಾದರೆ ಪಕ್ಷಾತೀತವಾಗಿ ಹೋರಾಡುವುದು ಅಗತ್ಯ ಎನ್ನುವುದ ನನ್ನ ಬಲವಾದ ನಂಬಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಹದಾಯಿ ಹೋರಾಟ ಉತ್ತರ ಕರ್ನಾಟಕದ ಸಮಸ್ಯೆ ಮಾತ್ರವಲ್ಲ, ಇದು ಕರ್ನಾಟಕದ ಸಮಸ್ಯೆ, ಈ ವಿವಾದ ಆದಷ್ಟು ಬೇಗ ಇತ್ಯಾರ್ಥವಾಗಬೇಕು ಎಂಬುದು ನಮ್ಮೆಲ್ಲರ ಆಸೆ. ನಾನು ಯಾವುತ್ತೂ ಉತ್ತರ ಕರ್ನಾಟಕ ಮಾತ್ರವಲ್ಲದೇ, ಎಲ್ಲಾ ಹೋರಾಟಗಾರರ ಜೊತೆಯಲ್ಲಿ ಇರುತ್ತೇನೆ ಎಂದು ಶಿವರಾಜ್ ಕುಮಾರ್ ಹೇಳಿದರು.
Comments