ಹೊಸ ವರ್ಷಕ್ಕೆ ಜಿಯೋ ಗ್ರಾಹಕರಿಗೆ ಬಂಫರ್ ಗಿಫ್ಟ್

ಹೊಸ ವರ್ಷಕ್ಕೆ ಜಿಯೋ ಪ್ರೈಮ್ ಗ್ರಾಹಕರಿಗಾಗಿ ಪ್ರಮುಖವಾಗಿ 199 ಮತ್ತು 299 ರೂ.ಗಳ ಎರಡೂ ಯೋಜನೆಗಳನ್ನ ರಿಲಯನ್ಸ್ ಬಿಡುಗಡೆ ಮಾಡಿದೆ. ಇದರಿಂದ ಮತ್ತೊಮ್ಮೆ ಟೆಲಿಕಾಂ ಇಂಡಸ್ಟ್ರಿಯಲ್ಲಿ ಹೊಸ ಸಂಚಲನ ಸೃಷ್ಟಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
199 ರೂ. ಪ್ಲಾನ್ ವೈಶಿಷ್ಟ್ಯಗಳೇನು?
ಉಚಿತ ವಾಯ್ಸ್ ಕಾಲ್,ಅನಿಯಮಿತ ಡೇಟಾ (ದಿನಕ್ಕೆ 1.2 ಜಿಬಿ ಹೈ ಸ್ಪೀಡ್ 4ಜಿ ಡೇಟಾ)
ಪ್ರೀಪೇಯ್ಡ್ ಗ್ರಾಹಕರು 199 ರೂ. ಪ್ಲಾನ್‌ನಲ್ಲಿ ಉಚಿತ ವಾಯ್ಸ್ ಕಾಲ್ ಹಾಗೂ ಅನಿಯಮಿತ ಡೇಟಾ ಸೌಲಭ್ಯ ದೊರೆಯಲಿದೆ. (ಒಂದು ದಿನಕ್ಕೆ 1.2 ಜಿಬಿ 4ಜಿ ಡೇಟಾ ಸೌಲಭ್ಯ ಸಿಗಲಿದೆ). 28 ದಿನಗಳ ಕಾಲ ಸೌಲಭ್ಯದ ಪ್ರಯೋಜನ ಪಡೆಯಬಹುದಾಗಿದೆ.
299 ರೂ. ಪ್ಲಾನ್ ವೈಶಿಷ್ಟ್ಯಗಳೇನು?
ಉಚಿತ ವಾಯ್ಸ್, ಅನಿಯಮಿತ ಡೇಟಾ (ದಿನಕ್ಕೆ 2 ಜಿಬಿ ಹೈ ಸ್ಪೀಡ್ 4ಜಿ ಡೇಟಾ), ಅನಿಯಮಿತ ಎಸ್‌ಎಂಎಸ್, 28 ದಿನಗಳ ಅವಧಿ
299 ರು. ರಿಚಾರ್ಜ್ ಪ್ಲಾನ್‌ನಲ್ಲಿ ಉಚಿತ ವಾಯ್ಸ್ ಕಾಲ್ ಹಾಗೂ ದಿನಕ್ಕೆ 2 ಜಿಬಿ 4ಜಿ ಡೇಟಾ ಸೌಲಭ್ಯ ಸಿಗಲಿದೆ. ಅನಿಯಮಿತ ಎಸ್ಎಂಎಸ್ ಸೌಲಭ್ಯವೂ ದೊರೆಯುತ್ತದೆ. 28 ದಿನಗಳ ಕಾಲ ಇದರ ಕಾಲಾವಕಾಶವಿದೆ. ಈ ಯೋಜನೆಗಳ ಮೂಲಕ ಹೊಸ ವರ್ಷಕ್ಕೆ ದಾಪುಗಾಲು ಇಡುತ್ತಿರುವ ರಿಲಯನ್ಸ್ ಗ್ರಾಹಕರಿಗೆ ಬಂಪರ್ ಗಿಫ್ಟ್ ನೀಡಿದೆ.
Comments