ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕೆ ನಮ್ಮ ಮೆಟ್ರೋ ನಿಂದ ಸಿಹಿ ಸುದ್ದಿ
ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಮಾಡಿ ತಡರಾತ್ರಿ ಮನೆಗೆ ತೆರಳುವವರಿಗೆ ಅನುಕೂಲ ಮಾಡಿಕೊಡಲು ನಮ್ಮ ಮೆಟ್ರೊ ರಾತ್ರಿ ವೇಳೆಯ ಸಂಚಾರದ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ. ಕ್ರಿಸ್ ಮಸ್ ಮುನ್ನಾದಿನ ರಾತ್ರಿ ಮೆಟ್ರೊ ರೈಲು ಎರಡು ಗಂಟೆ ಹೆಚ್ಚು ಕಾಲ ಮತ್ತು ಹೊಸ ವರ್ಷ ಮುನ್ನಾದಿನ ಮೂರು ಗಂಟೆಗಳ ಹೆಚ್ಚಿನ ಅವಧಿಯಲ್ಲಿ ಸಂಚರಿಸಲಿದೆ.
ಕ್ರಿಸ್ ಮಸ್ ಮತ್ತು ಹೊಸ ವರ್ಷ ಮುನ್ನಾದಿನ ಹೆಚ್ಚುವರಿ ಮೆಟ್ರೊ ರೈಲು ರಾತ್ರಿ ವೇಳೆ ಹೆಚ್ಚಿನ ಅವಧಿಗೆ ಸಂಚರಿಸಲಿದ್ದು ಹೆಚ್ಚುವರಿ ಸಿಬ್ಬಂದಿಗಳನ್ನು ಕೂಡ ನಿಯೋಜಿಸಲಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್, ಇದೇ 24ರಂದು ಮೆಟ್ರೊ ರೈಲು ರಾತ್ರಿ 11 ಗಂಟೆಯಿಂದ ಮರುದಿನ ಡಿಸೆಂಬರ್ 25ರಂದು ಮಧ್ಯರಾತ್ರಿ 1 ಗಂಟೆಯವರೆಗೆ ಮೆಟ್ರೊ ಸಂಚರಿಸಲಿದೆ. ಡಿಸೆಂಬರ್ 31ರಂದು ರಾತ್ರಿ 11 ಗಂಟೆಯಿಂದ ಮರುದಿನ ಜನವರಿ 1ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಪ್ರಯಾಣಿಕರ ಅನುಕೂಲಕ್ಕೆ ಮೆಟ್ರೊ ಸಂಚರಿಸಲಿದೆ ಎಂದು ಹೇಳಿದರು.
Comments