ಸಿದ್ದಗಂಗಾ ಮಠದ ಶ್ರೀಗಳಿಗೆ ‘ಶತಮಾನದ ಶ್ರೀ’ ಪ್ರಶಸ್ತಿ

22 Dec 2017 11:40 AM | General
334 Report

ಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ ಅವರನ್ನು ‘ಶತಮಾನದ ಶ್ರೀ’ ಗೌರವದೊಂದಿಗೆ ಅಭಿನಂದಿಸಲು ‌ಬೆಂಗಳೂರು ಪ್ರೆಸ್‌ಕ್ಲಬ್ ತೀರ್ಮಾನಿಸಿದೆ.

‘ಪ್ರೆಸ್‌ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಚಿತ್ರ ನಟ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ 31ರಂದು ಬೆಳಿಗ್ಗೆ 10ಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರೆಸ್‌ಕ್ಲಬ್ ಪ್ರಕಟಣೆ ತಿಳಿಸಿದೆ.ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದವರು: ಪ್ರಸಾರ ಭಾರತಿ ಅಧ್ಯಕ್ಷ ಎ. ಸೂರ್ಯಪ್ರಕಾಶ್, ಹಿರಿಯ ಪತ್ರಕರ್ತರಾದ ರಾಜಾ ಶೈಲೇಶ್ ಚಂದ್ರಗುಪ್ತ, ಅರೆಕೆರೆ ಜಯರಾಂ, ಬಿ.ವಿ. ಮಲ್ಲಿಕಾರ್ಜುನಯ್ಯ, ಸುಗತ ಶ್ರೀನಿವಾಸರಾಜು, ಈಶ್ವರ ದೈತೋಟ, ಎಚ್.ಆರ್. ರಂಗನಾಥ, ಆಯೇಷಾ ಖಾನಮ್, ಕೆ. ವೆಂಕಟೇಶ್, ವಿ. ರಾಮಸ್ವಾಮಿ ಕಣ್ವ, ಮಂಜುನಾಥ ಅದ್ದೆ.

 

Edited By

Shruthi G

Reported By

Shruthi G

Comments