'ಕಥನ ಭಾರತಿ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿಯ 2017ರ ಸಾಲಿನ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಲಾಗಿದ್ದು, ಕನ್ನಡದ ಒಂದು ಕೃತಿ ಹಾಗೂ ಮತ್ತೊಂದು ಅನುವಾದಿತ ಕೃತಿ ಆಯ್ಕೆಯಾಗಿವೆ. 2017ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಕನ್ನಡದ ಟಿ.ಪಿ. ಅಶೋಕ ಅವರ ಕಥನ ಭಾರತಿ ಕೃತಿ ಆಯ್ಕೆಯಾಗಿದೆ.
ಪ್ರಶಸ್ತಿಯು 1 ಲಕ್ಷ ನಗದು ಒಳಗೊಂಡಿದೆ. 2017ರ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಯನ್ನೂ ಪ್ರಕಟಿಸಲಾಗಿದ್ದು, ಕನ್ನಡದ ಎಚ್.ಎಸ್. ಶ್ರೀಮತಿ ಅವರು ಅನುವಾದಿಸಿದ ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ- 1 ಮತ್ತು 2 ಕೃತಿ ಆಯ್ಕೆಯಾಗಿವೆ. ಪ್ರಶಸ್ತಿ 50 ಸಾವಿರ ನಗದು ಒಳಗೊಂಡಿದೆ ಎಂದು ಅಕಾಡೆಮಿ ತಿಳಿಸಿದೆ.
Comments