ತೈಮೂರ್ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಸಿಕ್ತು ಫಾರೆಸ್ಟ್

ರುಜುತಾ ತೈಮೂರ್ ಗೆ ಶುಭಕೋರಿ ಫೋಟೋವೊಂದನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾರೆ. ತೈಮೂರ್ ಗೆ ಹಕ್ಕಿ, ಪಕ್ಷಿ, ಜೇನುನೊಣ, ಚಿಟ್ಟೆಗಳನ್ನು ನೋಡಲು ಮುಂಬೈನಲ್ಲಿ ಸಿಗೋದಿಲ್ಲ. ಹಾಗಾಗಿ ಸಣ್ಣ ಫಾರೆಸ್ಟ್ ಒಂದನ್ನು ಉಡುಗೊರೆಯಾಗಿ ನೀಡ್ತಿದ್ದೇವೆಂದು ರುಜುತಾ ಹೇಳಿದ್ದಾರೆ.
ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮಗ ತೈಮೂರ್ ಅಲಿ ಖಾನ್ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಪಟೌಡಿಯಲ್ಲಿ ಅದ್ಧೂರಿಯಾಗಿ ತೈಮೂರ್ ಹುಟ್ಟುಹಬ್ಬ ಆಚರಿಸಲಾಗಿದೆ. ಈ ಮಧ್ಯೆ ಕರೀನಾ ಕಪೂರ್ ಖಾನ್ ನ್ಯೂಟ್ರಿಷಿಯನ್ ರುಜುತಾ ದಿವಾಕರ್ ತೈಮೂರ್ ಗೆ ನೀಡಿದ ಉಡುಗೊರೆ ಬಗ್ಗೆ ಇನ್ಸ್ಟ್ರಾಗ್ರಾಮ್ ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಪಟೌಡಿಯಲ್ಲಿ ಈ ಸಣ್ಣ ಫಾರೆಸ್ಟ್ ಶುರುಮಾಡಲಾಗಿದೆ. ಫೋಟೋದಲ್ಲಿರುವಂತೆ ಇದ್ರಲ್ಲಿ ಬಾಳೆ ಗಿಡಗಳನ್ನು ನೆಟ್ಟಿದ್ದಾರೆ. ತೈಮೂರ್ ಬೆಳೆದಂತೆ ಗಿಡಗಳು ಬೆಳೆಯಲಿದ್ದು, ಸಮಾಜಕ್ಕೆ ಮಾದರಿಯಾಗಲಿದ್ದಾನೆಂಬ ನಂಬಿಕೆ ನಮ್ಮದು ಎಂದು ರುಜುತಾ ದಿವಾಕರ್ ಹೇಳಿದ್ದಾರೆ.
Comments