ಸಾರ್ವಜನಿಕ ಪ್ರದೇಶ ಗಳಲ್ಲಿ ಉಗುಳುವವರಿಗೆ ವಿಶೇಷ ಶಿಕ್ಷೆ ?

ಕ್ಲೀನ್ ಸರ್ವೇ 2017ರಲ್ಲಿ ದೇಶದ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಾತ್ರವಾದ ಇಂದೋರ್ ನ ಸಾರ್ವಜನಿಕ ಪ್ರದೇಶ ಗಳಲ್ಲಿ ಉಗುಳುವವರಿಗೆ ವಿಶೇಷ ಶಿಕ್ಷೆ ನೀಡಲು ಸ್ಥಳೀಯ ಪುರಸಭೆ ಮುಂದಾಗಿದೆ. ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿ ಇಂದೋರ್ ನಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಈ ಕ್ರಮಕ್ಕೆ ಮುಂದಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪಾನ್ ಅಥವಾ ಗುಟ್ಕಾ ಉಗುಳುವವರಿಗೆ 500 ರು. ದಂಡ ಹಾಗೂ ಉಗುಳುವವರ ಹೆಸರನ್ನು ದಿನಪತ್ರಿಕೆ ಹಾಗು ರೇಡಿಯೋ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುವುದು. ಈ ಮೂಲಕ ಉಗುಳು ವುದಕ್ಕೆ ಕಡಿವಾಣ ಹಾಕಲಾಗುವುದು ಎಂದು ಮೇಯರ್ ಮಾಲಿನಿ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ. ಟ್ರಾಫಿಕ್ ಸಿಗ್ನಲ್ ಗಳಲ್ಲಿ ಹಾಗು ರಸ್ತೆ ಡಿವೈಡರ್ ಗಳ ಮೇಲೆ ಉಗುಳಲಾಗುತ್ತಿದೆ. ಇಲ್ಲಿ ಪುರಸಭೆಯ ನೌಕರರನ್ನು ನೇಮಿಸಿ ಉಗುಳುವ ವ್ಯಕ್ತಿಗಳಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.
Comments