ಚಿನ್ನಾಭರಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ

20 Dec 2017 5:05 PM | General
372 Report

ಆಟೋದಲ್ಲಿ ಪ್ರಯಾಣಿಕರೊರ್ವರು ಬಿಟ್ಟು ಹೋಗಿದ್ದ ಚಿನ್ನಾಭರಣವನ್ನು ಪೊಲೀಸರ ನೆರವಿನಿಂದ ವಾರಸುದಾರರಿಗೆ ತಲುಪಿಸುವ ಮೂಲಕ ಮಹಿಳೆಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಆಟೋದಲ್ಲಿ ಪ್ರಯಾಣಿಸುತ್ತಿದ್ದ ಸಮೀನಾಬಾನು 55 ಗ್ರಾಂ ತೂಕದ ಚಿನ್ನದ ಸರವನ್ನು ಆಟೋದಲ್ಲೇ ಮರೆತು ಹೋಗಿದ್ದಾರೆ. ಅದೇ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಆಶಾ ಸರವನ್ನು ಗಮನಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತಲುಪಿಸಿದ್ದಾರೆ.

ಎಸ್ಪಿಯವರ ಸೂಚನೆಯಂತೆ ತುಂಗಾ ನಗರ ಠಾಣೆ ಪೊಲೀಸರು ಸರ ಕಳೆದುಕೊಂಡಿದ್ದ ಸಮೀನಾಬಾನು ಅವರನ್ನು ಪತ್ತೆ ಹಚ್ಚಿ ಆಶಾ ಅವರ ಮೂಲಕ ತಲುಪಿಸಿದ್ದಾರೆ. ಆಶಾ ಅವರ ಪ್ರಾಮಾಣಿಕತೆಗೆ ಮತ್ತು ಪೊಲೀಸರ ಸಹಕಾರಕ್ಕೆ ಸಮೀನಾಬಾನು ಕೃತಜ್ಞತೆ ಸಲ್ಲಿಸಿದ್ದಾರೆ.

Edited By

Hema Latha

Reported By

Madhu shree

Comments