ಕ್ರಿಸ್ಮಸ್ ಆಚರಿಸುವವರೇ ಜವಾಬ್ದಾರಿ ಹೊರಿ: ಹಿಂದೂ ಜಾಗರಣ ಮಂಚ್

ಅಲಿಘರ್: ಉತ್ತರಪ್ರದೇಶದ ಅಲಿಘಡದಲ್ಲಿ ಕ್ರಿಸ್ಮಸ್ಗೆ ಆಚರಣೆಗೆ ಅವಕಾಶ ಕೊಡಬಾರದು ಎಂದು ಹಿಂದೂ ಜಾಗರಣ್ ಮಂಚ್ ಸದಸ್ಯರು ಶಾಲೆಗಳಿಗೆ ಪತ್ರ ಬರೆದಿದ್ದಾರೆ. ಕ್ರಿಸ್ಮಸ್ ಆಚರಿಸುವವರು ಅವರೇ ಹೊಣೆ ಹೊರಬೇಕು ಎಂದು ಬೆದರಿಕೆಯ ಮಾದರಿಯಲ್ಲಿ ಹಿಂದೂ ಜಾಗರಣ ಮಂಚ್ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ಕ್ರಿಸ್ಮಸ್ ಆಚರಿಸಿದಲ್ಲಿ, ಮುಂದೆ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿರುವ ಆರೋಪ ಕೂಡ ಎದುರಾಗಿದೆ. ಈ ಸಂಬಂಧ ಶಾಲೆಯ ಆಡಳಿತ ಮಂಡಳಿಗಳಿಗೆ ಪತ್ರವನ್ನು ನೀಡಲಾಗಿದೆ. ಈ ಕುರಿತು ಶಾಲೆಗಳಿಗೆ ತಾಕೀತು ಮಾಡಿರುವ ಹಿಂದೂ ಮುಖಂಡರು, ಡಿಸೆಂಬರ್ 25ರಂದು ನಡೆಯಲಿರುವ ಕ್ರಿಸ್ಮಸ್ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಘಟನೆಯಿಂದ ಯೋಗಿ ಸಿಎಂ ಆದಿತ್ಯನಾಥ್ ನಾಡಿನಲ್ಲಿ ಗೂಂಡಾಗಿರಿ ನಡೆಯುತ್ತಿರುವುದು ಸಾಬೀತಾಗಿದ್ದು, ನೈತಿಕ ಪೊಲೀಸ್ಗಿರಿ ಕೂಡ ಜಾರಿಯಲ್ಲಿರುವುದು ಸ್ಪಷ್ಟವಾದಂತಾಗಿದೆ. ಆದರೆ, ಸರ್ಕಾರ ಮತ್ತು ಅಧಿಕಾರಿಗಳು ಇದುವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷಗಳು, ಯಾವ ಕ್ರಮ ಕೈಗೊಳ್ಳುತ್ತಾರೆ? ಎಂದು ಪ್ರಶ್ನಿಸಿವೆ. ಬಿಜೆಪಿ ಇಂಥ ಕ್ರಮಗಳನ್ನು ಬೆಂಬಲಿಸುವುದಿಲ್ಲ ಎಂದಿದೆ. ಅಲ್ಲದೇ, ಶಾಲೆಗಳು ಈ ಕುರಿತು ದೂರು ನೀಡಲಿ ಎನ್ನುವ ಮೂಲಕ ಕ್ರಮ ಕೈಗೊಳ್ಳಲು ಸರ್ಕಾರ ಮೀನಮೇಷ ಎಣಿಸುತ್ತಿರುವ ಸಂಗತಿ ಬಹಿರಂಗವಾಗಿದೆ.
ಮಾಧ್ಯಮಗಳಲ್ಲಿ ಈ ಕುರಿತು ವರದಿಯಾದ ಬಳಿಕ ಎಚ್ಚೆತ್ತ ಪೊಲೀಸರು ಪತ್ರ ಹಂಚಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
Comments