ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿಸುದ್ದಿ

ತಿರುಪತಿಯಲ್ಲಿ ಇದೀಗ ಹೊಸದೊಂದು ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಭಕ್ತರಿಗೆ ಸರತಿ ಸಾಲಿನಲ್ಲಿ ನಿಲ್ಲುವ ಬದಲು ಒಂದು ಸಮಯ ನಿಗದಿ ಪಡಿಸಿ ಕಾರ್ಡ್ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಹೊಸ ವ್ಯವಸ್ಥೆ ಪ್ರಕಾರ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಗಣಕೀಕೃತ ಕಾರ್ಡ್ ನೀಡಲಾಗುತ್ತದೆ.
ಅದರಲ್ಲಿ ಭಕ್ತರು ತಿಮ್ಮಪ್ಪನ ದರ್ಶನ ಪಡೆಯಬೇಕಾದ ಸಮಯವನ್ನು ನಿಗದಿ ಮಾಡಲಾಗುತ್ತದೆ. ಈ ಸಮಯದಲ್ಲಿ ಭಕ್ತರು ನೇರವಾಗಿ ದರ್ಶನದ ಸಾಲನ್ನು ಪ್ರವೇಶಿಸಬಹುದಾಗಿದೆ. ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ. ಮೊದಲ ದಿನದಿಂದ 21 ಸಾವಿರ ಕಾರ್ಡ್'ಗಳನ್ನು ವಿತರಿಸಲಾಗಿದ್ದು, 10 ಸಾವಿರ ಮಂದಿ ಈ ಸೌಲಭ್ಯ ಪಡೆಕೊಂಡಿದ್ದಾರೆ.
Comments