ಇನ್ಮುಂದೆ ಬಿಎಂಟಿಸಿ ಪ್ರಯಾಣಿಕರಿಗೆ ಸಿಗಲಿದೆ ಫ್ರೀ ವೈಫೈ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದ್ದು, ಇನ್ಮುಂದೆ ಪ್ರಯಾಣಿಕರಿಗೆ ಫ್ರೀ ವೈಫೈ ಸೇವೆ ನೀಡಲು ನಿರ್ಧರಿಸಿದೆ.
ಹೌದು,ಬಿಎಂಟಿಸಿ ವೋಲ್ವೋ ಬಸ್‌ಗಳಲ್ಲಿ ನೀಡಲಾಗುತ್ತಿದ್ದ ಉಚಿತ ವೈಫೈ ಸೇವೆಯನ್ನು ಎಸಿ ರಹಿತ ಸಾಮಾನ್ಯ ಬಸ್‌ಗಳಲ್ಲೂ ನೀಡಲು ನಿರ್ಧರಿಸಿದೆ. ಬಿಎಂಟಿಸಿಗಳಲ್ಲಿ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿದ್ದ ವೇಳೆ ಪಡೆಯುತ್ತಿದ್ದ ಉಚಿತ ವೈಫೈ ಸೇವೆ ಬಸ್‌ನಲ್ಲಿ ಪ್ರಯಾಣಿಸುವಾಗಲೂ ಸಿಗಲಿದೆ.ಪ್ರತಿಯೊಬ್ಬ ಪ್ರಯಾಣಿಕನಿಗೂ 30MB ಉಚಿತ ವೈಫೈ ನೀಡಲು ನಿರ್ಧರಿಸಲಾಗಿದೆ. ಬಸ್‌ನಲ್ಲಿಯೇ ಲಾಗಿನ್ ಐಡಿ, ಪಾಸ್ ವರ್ಡ್ ನೀಡಲಾಗುತ್ತದೆ.7.2 Mpbs ವೇಗದ ಇಂಟರ್‌ನೆಟ್ ಸೇವೆ ನೀಡಲು ಟೆಂಡರ್ ಕರೆಯಲಾಗಿದೆ.
ಆದರೆ ಉಚಿತ ವೈಫೈ ಸೇವೆ ನೀಡಲು ಬಿಎಂಟಿಸಿ ಯಾವುದೇ ರೀತಿಯ ಹಣ ವ್ಯಯಿಸುತ್ತಿಲ್ಲ.ಬದಲಾಗಿದೆ ಟೆಂಡರ್ ಪಡೆಯುವ ಏಜೆನ್ಸಿಗೆ ಬಸ್‌ನಲ್ಲಿ ಉಚಿತವಾಗಿ ಜಾಹೀರಾತು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುತ್ತದೆ. ಹೀಗಾಗಿ ಫ್ರೀ ವೈಫೈ ಸೇವೆ ನೀಡುವ ಬಿಎಂಟಿಸಿಗೆ ಮತ್ತೆ ಹೆಚ್ಚುವರಿಯಾಗಿ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ.ಈ ಕುರಿತು ಮಾಹಿತಿ ನೀಡಿದ ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್,ಇಂದು ಬಹುತೇಕ ಪ್ರಯಾಣಿಕರು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದಾರೆ.ಇಂಟರ್ ನೆಟ್ ಸೇವೆ ನೀಡಿದರೆ ಅವರಿಗೆ ಉಪಯೋಗವಾಗಲಿದೆ. ಸಾಮಾನ್ಯ ಬಸ್‌ಗಳಲ್ಲಿಯೂ ಹೆಚ್ಚು ಹೆಚ್ಚು ಪ್ರಯಾಣಿಕರು ಸಂಚರಿಸಲಿದ್ದಾರೆ. ಜೊತೆಗೆ ನಾವು ಫ್ರೀ ವೈಫೈ ಸೇವೆ ನೀಡಿದರೆ ಕೆಲ ಪ್ರಯಾಣಿಕರಿಗೆ ಅವರ ಕಚೇರಿಗೆ ಸಂಬಂಧಿಸಿದ ಕೆಲಸಕ್ಕೆ ಸಹಕಾರಿಯಾಗಬಹುದು ಹಾಗಾಗಿ ನಾವು ಫ್ರೀ ವೈಫೈ ಸೇವೆ ನೀಡಲು ನಿರ್ಧರಿಸಿದ್ದೇವೆ ಎಂದರು.
Comments