ಮದುಮಗಳ ಉಡುಗೆಯೊಂದು ಗಿನ್ನೆಸ್ ದಾಖಲೆ ನಿರ್ಮಿಸಿದೆ
ಫ್ರಾನ್ಸ್ ನಲ್ಲಿ ತಯಾರಿಸಲಾದ ಮದುಮಗಳ ಉಡುಗೆಯೊಂದು ಗಿನ್ನೆಸ್ ದಾಖಲೆಯನ್ನು ನಿರ್ಮಿಸಿದೆ. ಡೈನಾಮಿಕ್ ಪ್ರೊಜೆಕ್ಟ್ಸ್ ಎನ್ನುವ ಕಂಪೆನಿಯೊಂದು ಈ ಉಡುಗೆಯನ್ನು ತಯಾರಿಸಿದೆ. ಇದರ ಉದ್ದ 8,095 ಮೀಟರ್ ಇದ್ದು, ಜಗತ್ಪಸಿದ್ಧ ಐಫೆಲ್ ಟವರ್ ಗಿಂತ 27 ಪಟ್ಟು ಹೆಚ್ಚಾಗಿದೆ.
ಈ ಉಡುಗೆಯನ್ನು ತಯಾರಿಸಲು 15 ಜನರ ತಂಡ ಸುಮಾರು 2 ತಿಂಗಳುಗಳ ಕಾಲ ಕೆಲಸ ಮಾಡಿದೆ, ಈ ಮೂಲಕ ಈ ಹಿಂದಿನ 1,203 ಮೀಟರ್ ಉದ್ದದ ಉಡುಗೆಯ ದಾಖಲೆಯನ್ನೂ ಮುರಿಯಲಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತಂಡದ ರಾಬ್ ಮೊಲ್ಲೊಯ್, ವೃತ್ತಿಪರ ಸರ್ವೇಯರ್ ಗಳಾದ ಕ್ರಿಸ್ಟೋಫೆ ಡುಮೋಂಟ್ ಈ ಉಡುಗೆಯನ್ನು ಅಳತೆ ಮಾಡಿದ ನಂತರ ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ಹಸ್ತಾಂತರಿಸಲಾಗಿದೆ. ತದನಂತರ ಈ ಉಡುಗೆಯನ್ನು ತುಂಡರಿಸಿ ಮಾರಲಾಗಿದ್ದು, ಬಂದ ಹಣವನ್ನು ದಾನ ನೀಡಲಾಗಿದೆ.
Comments