ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಬೇಕು : ವಾಜುಬಾಯಿ ವಾಲಾ

ದೇಶ ದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಬೇಕು ಅವರ ಶವವೂ ಬೇರೆಯವರಿಗೆ ಸಿಗಬಾರದು ಎಂದು ರಾಜ್ಯಪಾಲ ವಿ.ಆರ್. ವಾಲಾ ಹೇಳಿದ್ದಾರೆ.
ನಗರದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ದಕ್ಷಿಣ ವಲಯ ವಕೀಲರ 2 ನೇ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಯೋತ್ಪಾದಕ ಕಸಬ್ ನನ್ನು ಗಲ್ಲಿಗೆ ಹಾಕಿರುವುದನ್ನು ವಿರೋಧಿಸಿ ದೇಶದೊಳಗೆ ಕೆಲವರು ಪ್ರತಿಭಟನೆ ಮಾಡಿದ್ದರು. ಅಂಥವರನ್ನು ಮೊದಲು ಬಂದೂಕಿನಿಂದ ಸುಡಬೇಕು. ಅವರ ಶವವನ್ನೂ ನೀಡಬಾರದು ಎಂದರು.ಕಸಬ್ ಮತ್ತು ಅಫ್ಜಲ್ ಗುರುಗೆ ಮರಣದಂಡನೆ ವಿಧಿಸಿದ ಹಲವು ವರ್ಷಗಳ ನಂತರ ಗಲ್ಲಿಗೆ ಹಾಕಲಾಗಿದೆ. ಈ ರೀತಿ ಸಮಯ ನೀಡಿದರೆ ರಾಷ್ಟ್ರಪತಿಗೆ ಕ್ಷಮಾಪಣ ಪತ್ರ ಬರೆಯುತ್ತಾರೆ. ದೇವರ ಮೊರೆ ಹೋಗುತ್ತಾರೆ. ಪತ್ರಿಕೆಗಳಲ್ಲಿ ಸುದ್ದಿಯಾಗುವ ಮೊದಲೇ ನೇಣಿಗೇರಿಸಬೇಕು ಎಂದರು.
Comments