ಕಲ್ಲಿದ್ದಲು ಹಗರಣ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿಗೆ 3 ವರ್ಷ ಜೈಲು ಶಿಕ್ಷೆ

ಬಹುಕೋಟಿ ಕಲ್ಲಿದ್ದಲು ಹಗರಣದಲ್ಲಿ ಆರೋಪ ಎದುರಿಸುತ್ತಿದ್ದ ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ , ಕಲ್ಲಿದ್ದಲು ಕಾರ್ಯದರ್ಶಿ ಎಚ್ ಸಿ ಗುಪ್ತಾ, ಜಾರ್ಖಂಡ್ ಮಾಜಿ ಮುಖ್ಯ ಕಾರ್ಯದರ್ಶಿ ಅಶೋಕ್ ಕುಮಾರ್ ಬಸು ಮತ್ತು ಕೋಡಾ ಅವರ ಆಪ್ತರಾದ ವಿಜಯ್ ಜೋಶಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಇಂದು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಇಂದು ವಿಶೇಷ ನ್ಯಾಯಧೀಶರಾದ ಭರತ್ ಪರಶಾರ್ ಅವರು ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ್ದು ಮಧು ಕೋಡಾ ಸೇರಿದಂತೆ ಕಲ್ಲಿದ್ದಲು ಕಾರ್ಯದರ್ಶಿ ಎಚ್ ಸಿ ಗುಪ್ತಾ, ಜಾರ್ಖಂಡ್ ಮಾಜಿ ಮುಖ್ಯ ಕಾರ್ಯದರ್ಶಿ ಅಶೋಕ್ ಕುಮಾರ್ ಬಸುಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳ ಮೇಲೆ ಕ್ರಿಮಿನಲ್ ಸಂಚು, ವಂಚನೆ, ಭ್ರಷ್ಟಾಚಾರ ಆರೋಪ ಹೊರಿಸಲಾಗಿತ್ತು. ಈ ಆರೋಪಗಳು ಸಾಬೀತಾಗಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲಿದ್ದಲು ಟೆಂಡರ್ ಪಡೆದಿದ್ದ ವಿಶೂಲ್ ಸಂಸ್ಧೆಗೆ ನ್ಯಾಯಾಲಯ 50 ಲಕ್ಷ ದಂಡ ವಿಧಿಸಿದೆ.
ಜಾರಿ ನಿರ್ದೇಶನಾಲಯದ ಪ್ರಕಾರ ಸುಮಾರು 2500 ಕೋಟಿ ರುಪಾಯಿ ಅವ್ಯವಹಾರ ಆರೋಪ ಹೊರೆಸಲಾಗಿತ್ತು. ನಂತರ 3400 ಕೋಟಿ ಅಕ್ರಮ ಬಯಲಿಗೆಳೆಯಲಾಗಿತ್ತು. ಸಿಬಿಐ ತಂಡ ದೇಶಾದ್ಯಂತ ಸುಮಾರು 70 ಕಡೆಗಳಲ್ಲಿ ದಾಳಿ ನಡೆಸಿದ್ದರು. ಮಧುಕೋಡಾ ಅವರ ಸ್ಥಿರ ಹಾಗೂ ಚರಾಸ್ಥಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಮುಟ್ಟುಗೋಲು ಹಾಕಿಕೊಂಡಿತ್ತು.
Comments