2ನೇ ಮದುವೆ ಬಗ್ಗೆ ಎಚ್ ಡಿಕೆ ಹೇಳಿದ್ದು ಹೀಗೆ

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮೊದಲ ಬಾರಿಗೆ 2ನೇ ಮದುವೆ ಬಗ್ಗೆ ಮೌನ ಮುರಿದಿದ್ದಾರೆ.ಕರಂಟ್ ಅಫೇರ್ಸ್ ಎಡಿಟರ್ ಜಯಪ್ರಕಾಶ್ ಶೆಟ್ಟಿ ಅವರೊಂದಿಗೆ ನೀಡಿದ ಸಂದರ್ಶನದಲ್ಲಿ 2ನೇ ವಿವಾಹದ ಬಗ್ಗೆ ಮಾತನಾಡಿದ ಅವರು' ಘಟನೆಯ ಬಗ್ಗೆ ಪಶ್ಚಾತ್ತಾಪ ಪಟ್ಟರು.
ನನ್ನ ಜೀವನದಲ್ಲಿ 2ನೇ ಮದುವೆ ನಾನು ಮಾಡಿರುವ ತಪ್ಪು. ಯಾವುದೋ ಒಂದು ಭಾವನಾತ್ಮಕವಾದ ತೀರ್ಮಾನದಿಂದ 2ನೇ ಮದುವೆಯಾದೆ. ಮೃದು ಸ್ವಭಾವ, ತಾಯಿ ಹೃದಯ, ವೀಕ್'ನೆಸ್'ನಿಂದಾಗಿ ಪೆಟ್ಟು ತಿಂದಿದ್ದೇನೆ. ಎರಡನೇ ಮದುವೆ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ತಪ್ಪು ಮಾಡಿದ್ದೇನೆ.
2ನೇ ಮದುವೆ ಮಾಡಿಕೊಂಡಿರುವುದು ಮನುಷ್ಯ ಸಹಜ ಸ್ವಭಾವದಲ್ಲಿಯೇ ತಪ್ಪು. ನಾನು ಎಂದಿಗೂ ಸಹ ಯಾರಿಗೂ ದ್ರೋಹ ಮಾಡಿಲ್ಲ. ಮದುವೆ ವಿಚಾರಗಳಲ್ಲಿ ಬಹಳ ಎಚ್ಚರಿಕೆ ವಹಿಸುವುದು ಸೂಕ್ತವೆಂದು ನನ್ನ ಸಲಹೆ. 2ನೇ ಮದುವೆ ಆಗಿರುವ ವಿಚಾರದಲ್ಲಿ ನನಗೆ ಇಂದಿಗೂ ಪಾಪಪ್ರಜ್ಞೆ ಕಾಡುತ್ತಿದೆ. ಯಾರೂ ಸಹ ಈ ರೀತಿಯ ದುಡುಕು ನಿರ್ಧಾರ ಮಾಡಬಾರದೆಂದು' ಕುಮಾರಸ್ವಾಮಿ ತಿಳಿಸಿದರು.
Comments