ನಾಳೆ ಎಚ್ ಡಿಕೆ ಹುಟ್ಟುಹಬ್ಬದಂದು ಮತ್ತೊಂದು ಅಪ್ಪಾಜಿ ಕ್ಯಾಂಟೀನ್ ಆರಂಭ

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಶನಿವಾರ ಜೆಡಿಎಸ್ ಕಚೇರಿಯಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭವಾಗಲಿದೆ. ರಾಗಿ ಮುದ್ದೆಗೆ ತುಪ್ಪ ಹಾಕಿ ಕೊಡುವುದು ಕ್ಯಾಂಟೀನ್ ಉದ್ಘಾಟನೆಯ ವಿಶೇಷ ವಾಗಿದೆ.
ಡಿ.16ರ ಶನಿವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 59ನೇ ಹುಟ್ಟುಹಬ್ಬ. ಹುಟ್ಟು ಹಬ್ಬದ ಪ್ರಯುಕ್ತ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್ ಆರಂಭವಾಗಲಿದೆ.ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ಡಿ.16ರಂದು ನಮ್ಮ ಅಪ್ಪಾಜಿ ಕ್ಯಾಂಟೀನ್ ಅನ್ನು ಜೆಡಿಎಸ್ ಕಚೇರಿಯಲ್ಲಿ ಆರಂಭಿಸುವುದಾಗಿ ಹೇಳಿದ್ದರು.
ಬೆಂಗಳೂರು ನಗರದಲ್ಲಿ ಉದ್ಘಾಟನೆಯಾಗುತ್ತಿರುವ 2ನೇ ನಮ್ಮ ಅಪ್ಪಾಜಿ ಕ್ಯಾಂಟೀನ್ ಇದಾಗಿದೆ. ಹನುಮಂತನಗರದಲ್ಲಿ ಮೊದಲ ಕ್ಯಾಂಟೀನ್ ದೇವೇಗೌಡರ ಹುಟ್ಟು ಹಬ್ಬದ ದಿನ ಉದ್ಘಾಟನೆಯಾಗಿತ್ತು.ಬೆಂಗಳೂರು ನಗರ ಹೊರತು ಪಡಿಸಿ ಮಂಡ್ಯದಲ್ಲಿ ಎರಡು ಕ್ಯಾಂಟೀನ್ ಗಳು ಆರಂಭವಾಗಿವೆ. '2018ರ ಜನವರಿಯಲ್ಲಿ ರಾಯಚೂರಿನಲ್ಲಿ ಕ್ಯಾಂಟೀನ್ ಗಳನ್ನು ಆರಂಭಿಸಲಾಗುತ್ತದೆ' ಎಂದು ಟಿ.ಎ.ಶರವಣ ಹೇಳಿದ್ದಾರೆ.
Comments