'43ನೇ ಕೇಕ್ ಶೋ' ಪ್ರದರ್ಶನ 15 ರಿಂದ ಜ.1 ವರೆಗೆ
ಬೆಂಗಳೂರು: ಕ್ರಿಸ್ ಮಸ್ ಗಾಗಿ ಹಲವರು ಕಾಯುತ್ತಿದ್ದಾರೆ. ಕ್ರಿಸ್ ಮಸ್ ಫೆಸ್ಟಿವಲ್ ಬೆನ್ನಲ್ಲೇ ಹೊಸ ವರ್ಷದ ಸಂಭ್ರಮ ಎಲ್ಲೆಡೆ ತಯಾರಿ ನಡೆಯುತ್ತಿದೆ.
ಬೆಂಗಳೂರು: '43ನೇ ಕೇಕ್ ಶೋ' ಆಯೋಜನೆ 15 ರಿಂದ ಜ.1 ವರೆಗೆ ಕ್ರಿಸ್ ಮಸ್ ಗಾಗಿ ಹಲವರು ಕಾಯುತ್ತಿದ್ದಾರೆ. ಕ್ರಿಸ್ ಮಸ್ ಫೆಸ್ಟಿವಲ್ ಬೆನ್ನಲ್ಲೇ ಹೊಸ ವರ್ಷದ ಸಂಭ್ರಮ ಎಲ್ಲೆಡೆ ತಯಾರಿ ನಡೆಯುತ್ತಿದೆ. ಈ ಅಂಗವಾಗಿ ಇನ್ ಸ್ಟಿಟ್ಯೂಟ್ ಆಫ್ ಬೇಕಿಂಗ್ ಆ್ಯಂಡ್ ಕೇಕ್ ಆರ್ಟ್ ಮತ್ತು ರಾಷ್ಟ್ರೀಯ ಗ್ರಾಹಕರ ಮೇಳದ ಸಹಯೋಗದಲ್ಲಿ ಡಿಸೆಂಬರ್ 15ರಿಂದ ಜನೆವರಿ 1ವರೆಗೆ 43ನೇ ಕೇಕ್ ಶೋ ಹಮ್ಮಿಕೊಳ್ಳಲಾಗಿದೆ.
ನಗರದ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಆವರಣದಲ್ಲಿ ಹದಿನೈದು ದಿನಗಳ ಕಾಲ ನಡೆಯುವ ಕೇಕ್ ಶೋ ದಲ್ಲಿ ಈ ಬಾರಿ 23 ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಗೇಟ್ ವೇ ಆಫ್ ಇಂಡಿಯಾ ಪ್ರಮುಖ ಆಕರ್ಷಣೆಯಾಗಲಿದೆ. ಇದರ ಜತೆಗೆ ಮಕ್ಕಳ ಮನ ಸೆಳೆಯುವ ಪಾಂಡಗಳು, ಡೈನೋಸಾರ್, ಸ್ಕೂಟರ್, ಸಂಗೀತಾಸಕ್ತರನ್ನು ಆಕರ್ಷಿಸುವ ಗಿಟಾರ್, ಯುವತಿಯರನ್ನು ಆಕರ್ಷಿಸುವ ಪ್ಯಾಲೆಟ್ , ಮತ್ಸಕನ್ಯೆ , ಗಂಧರ್ವ ಲೋಕ ಪರಿಚಯಿಸುವ ವಿವಾಹ ವೇದಿಕೆ ಮದುಮಗಳು ಹೊತ್ತೊಯ್ಯುವ ಪಲ್ಲಕ್ಕಿ , ಕ್ರೀಡಾ ಪಟುಗಳನ್ನು ಸೆಳೆವ ಫುಟಬಾಲ್ ಸೇರಿದಂತೆ 33 ನಾನಾ ವಿಷಯಾಧಾರಿತ ಕೇಕ್ ಕಲಾಕೃತಿಗಳು ಪ್ರಸರ್ಶನದಲ್ಲಿದೆ.ಅಲ್ಲದೇ ಕೇಕ್ ಶೋ ನಲ್ಲಿ ಹಲವು ಆಹಾರ ಮೇಳಗಳು ಕಣ್ಮನ ಸೆಳೆಯಲಿವೆ.
Comments