ಆಧಾರ್ ಜೋಡಣೆಗೆ ಮಾರ್ಚ್ 31 ಕೊನೆ ದಿನ

ಸರಕಾರದ ವಿವಿಧ ಸೇವೆಗಳು ಮತ್ತು ಜನಕಲ್ಯಾಣ ಯೋಜನೆಗಳ ಲಾಭವನ್ನು ಪಡೆಯುವುದಕ್ಕೆ ಆಧಾರ್ ಜೋಡಿಸುವ ಗಡುವನ್ನು ಸುಪ್ರೀಂ ಕೋರ್ಟ್ ಮಾರ್ಚ್ 31ರ ವರೆಗೆ ವಿಸ್ತರಿಸಿ ಮಧ್ಯಂತರ ಆದೇಶ ಹೊರಡಿಸಿದೆ. ಮೊಬೈಲ್ ಸೇವೆಗಳಿಗೆ ಆಧಾರ್ ಜೋಡಿಸುವ ಈಗಿನ ಫೆ.6ರ ಗಡುವನ್ನು ಕೂಡ ಸುಪ್ರೀಂ ಕೋರ್ಟ್ ಮಾಚ್ 31ರ ವರೆಗೆ ವಿಸ್ತರಿಸಿದೆ.
ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಹಾಗೂ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಲು ನಿಗದಿಪಡಿಸಿರುವ 2017ರ ಡಿಸೆಂಬರ್ 31ರ ಗಡುವನ್ನು 2018 ಮಾರ್ಚ್ 31ರ ವರೆಗೆ ವಿಸ್ತರಿಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಸದ್ಯ ಸುಪ್ರೀಂ ಕೋರ್ಟ್ ಕೂಡ ಕೇಂದ್ರದ ನೀತಿಗೆ ಒಪ್ಪಿಗೆ ಸೂಚಿಸಿ ಮಧ್ಯಂತರ ಆದೇಶ ಹೊರಡಿಸಿದೆ. ಮಾರ್ಚ್ 31ರವರೆಗೆ ಆಧಾರ್ ಜೋಡಣೆಗೆ ಅಂತಿಮ ಗಡುವು ನೀಡಲಾಗಿದೆ. ಸದ್ಯ ಸುಪ್ರೀಂ ಆದೇಶದಿಂದಾಗಿ ಕೇಂದ್ರ ಸರ್ಕಾರಕ್ಕೂ ನಿರಾಳ ಎನಿಸಿದೆ.
Comments