ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ಪತ್ರಕರ್ತ ರವಿ ಬೆಳಗೆರೆ

ಮೂರು ದಿನಗಳ ಕಾಲ ಷರತ್ತುಬದ್ಧ ಜಾಮೀನು ಪಡೆದ ನಂತರ ಹಾಯ್ ಬೆಂಗಳೂರು ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆಗೆ ಮತ್ತೆ ಸಂಕಷ್ಟ ಶುರುವಾಗಿದೆ.
ಸಾಗರ ಹಾಗೂ ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್'ನಿಂದ 2 ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ. ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಂಜಯ ನಗರ ಠಾಣೆಯಲ್ಲಿ ಉದ್ಯಮಿ ಬಾಬಿಗೌಡ ಎಂಬುವವರು ಹಾಗೂ ಸಾಗರ ಮೂಲದ ಕಾಂಗ್ರೆಸ್ ಮುಖಂಡ ಲಿಂಗರಾಜು ಎಂಬುವವರು ಅವಹೇಳನಕಾರಿ ಬರಹ ಬರೆದ ಬರೆದ ಹಿನ್ನಲೆಯಲ್ಲಿ ದೂರು ದಾಖಲಿಸಿದ್ದಾರೆ.ಎರಡೂ ಠಾಣೆಯ ಪೊಲೀಸರು ಅರೆಸ್ಟ್ ವಾರೆಂಟ್ ಪ್ರತಿ ಪಡೆದು ಜೈಲಿನ ಕಡೆ ಹೊರಟಿದ್ದಾರೆ ಎನ್ನಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Comments