ಗುಜರಾತ್ ಚುನಾವಣೆಯ ಬಗ್ಗೆ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

ಸಂಕ್ರಾಂತಿ, ಯುಗಾದಿ, ದಸರಾ ವೇಳೆಗೆ ಮಾತ್ರ ಹೆಚ್ಚಾಗಿ ಭವಿಷ್ಯ ನುಡಿಯುತ್ತಿದ್ದ ಕೋಡಿಮಠದ ಶ್ರೀಗಳು, ಶ್ರವಣಬೆಳಗೊಳದಲ್ಲಿ ಒಗಟಿನ ರೂಪದಲ್ಲಿ ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆ, ಶ್ರವಣಬೆಳಗೊಳದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ವೇಳೆ ಮಾತನಾಡಿದ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, 'ಬಿತ್ತಿದೆ ಬೆಳೆ ಪರರು ಕೊಯ್ದಾರು' ಎಂದು ನುಡಿದಿದ್ದಾರೆ.
ನೀವು ನುಡಿದ ಭವಿಷ್ಯ ಗುಜರಾತ್ ಅಸೆಂಬ್ಲಿ ಚುನಾವಣೆಗೆ ಸಂಬಂಧಿಸಿದ್ದಾ ಎಂದು ಮಾಧ್ಯಮದವರ ಪ್ರಶ್ನೆಗೆ, ಯಾವುದೇ ಉತ್ತರ ನೀಡದೇ, ಮಾಧ್ಯಮದವರ ನಗುತ್ತಾ ಕಾರು ಹತ್ತಿ ಏರಿ ಹೋಗಿದ್ದಾರೆ. ಆ ಮೂಲಕ, ಮಾಧ್ಯಮದವರ ಮತ್ತು ಜನಗಳ ತಲೆಗೆ ಹುಳಬಿಟ್ಟು ತೆರಳಿದ್ದಾರೆ. ಕಳೆದ ಸೆಪ್ಟಂಬರ್ ತಿಂಗಳಲ್ಲಿ ಧಾರವಾಡದಲ್ಲಿ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು, ದೇಶ ಕಂಡ ಮಹಾನ್ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವಿನ ದುರ್ಘಟನೆಯನ್ನು ನೆನಪಿಸುವ ಸಾವೊಂದು ಸಂಭವಿಸಲಿದೆ ಎಂದು ನುಡಿದಿದ್ದರು.
ಅಲಹಾಬಾದ್ ಮೂಲದ ಸದ್ಯ ದೆಹಲಿ ನಿವಾಸಿಯಾಗಿರುವ ಅನಿರುದ್ದ ಕುಮಾರ್ ಮಿಶ್ರಾ ಎನ್ನುವ ಜ್ಯೋತಿಷಿಯೊಬ್ಬರು, ಗುಜರಾತ್ ಚುನಾವಣೆಯಲ್ಲಿ ಗೆಲ್ಲೋದು ಬಿಜೆಪಿಯೇ ಅನ್ನುವ ಭವಿಷ್ಯವನ್ನು ನುಡಿದಿದ್ದರು. ಮಿಶ್ರಾ ನುಡಿದ ಭವಿಷ್ಯದ ಪ್ರಕಾರ, ಬಿಜೆಪಿಗೆ 127-134, ಕಾಂಗ್ರೆಸ್ಸಿಗೆ 40- 45 ಸ್ಥಾನ ಸಿಗಬಹುದು. ಇತರರು 0-5 ಸ್ಥಾನ ಸಂಪಾದಿಸಬಹುದು ಎಂದು ಹೇಳಿದ್ದರು.ಮುಂದಿನ ದಿನಗಳಲ್ಲಿ ದೇಶ ಇನ್ನೂ ಹಲವು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ದ್ವೇಷ, ಸ್ವಾರ್ಥ, ಅಸೂಯೆಯಿಂದ ಕೂಡಿದ ರಾಜಕಾರಣದಿಂದ ವ್ಯವಸ್ಥೆ ಮತ್ತಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು, ಚುನಾವಣಾ ವರ್ಷದಲ್ಲಿ ರಾಜಕೀಯ ಪಕ್ಷಗಳ ಮೇಲಾಟ ಇನ್ನಷ್ಟು ಹೆಚ್ಚಾಗಲಿದೆ ಎನ್ನುವುದನ್ನು ಶ್ರೀಗಳು ಪರೋಕ್ಷವಾಗಿ ನುಡಿದಿದ್ದಾರೆ.
Comments