ರಾಜ್ಯದ ಜನತೆಗೆ ಕಹಿ ಸುದ್ದಿ: ದಿನಕ್ಕೆ 8 ಗಂಟೆ ಪವರ್ ಕಟ್ ಮಾಡಲು ಚಿಂತನೆ

ವಿದ್ಯುತ್ ಕಂಪನಿಗಳ ಹಿರಿಯ ಅಧಿಕಾರಿಗಳು ಕೂಡಲೇ ತುರ್ತು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದಿನಕ್ಕೆ 8 ಗಂಟೆ ವಿದ್ಯುತ್ ಕಡಿತ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ನಾವು ಈಗಲೇ ಮುಮಜಾಗ್ರತ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಜನರ ಕೋಪ ನಮ್ಮ ಮೇಲೆ ಬೀಳುತ್ತದೆ ಎಂದು ಹೇಳಿದ್ದಾರೆ.ಇ ಬಗ್ಗೆ ಪ್ರಸ್ತುತ ವಿದ್ಯಾಮಾನಗಳು ಮತ್ತು ಮುಂದಿನ ಮಾರ್ಚ್ ವೇಳೆಗೆ ಎದುರಾಗುವ ಸಮಸ್ಯೆಗಳ ಬಗ್ಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಬಳಿ ವರದಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಪವನ ವಿದ್ಯುತ್ 3 ಮಿಲಿಯನ್ ಯುನಿಟ್ ಮಾತ್ರ ಸಿಗುತ್ತಿದೆ. ವಿದ್ಯುತ್, ಉಷ್ಣ ವಿದ್ಯುತ್ ನಿಂದ ಸಾಕಷ್ಟು ಪ್ರಯೋಜವಾಗುತ್ತಿದ್ದರೂ ಅಗತ್ಯದ ವಿದ್ಯುತ್ ನೀಡುವುದು ಅಸಾಧ್ಯವಾಗುತ್ತದೆ.
Comments