ನಿವೇಶನದ ಖಾತಾಗಾಗಿ 90 ರ ವೃದ್ಧೆ ಅಹೋರಾತ್ರಿ ಉಪವಾಸ ಆರಂಭಿಸಿದ್ದಾರೆ

ವೃದ್ಧೆಯೊಬ್ಬರು ತಮ್ಮ ನಿವೇಶನದ ಖಾತಾ ಮಾಡಿಕೊಡುತ್ತಿಲ್ಲವೆಂದು ತನ್ನ ಮೊಮ್ಮಗನೊಂದಿಗೆ ಆಹೋರಾತ್ರಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ಪಂಚಾಯಿತಿ ಕಚೇರಿಯ ಮುಂಭಾಗ ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಗ್ರಾಮದ ವೃದ್ಧೆ ನಿಂಗಮ್ಮ ಸತ್ಯಾಗ್ರಹ ಆರಂಭಿಸಿದ್ದಾರೆ
ಮತ್ತೀಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವಲಿಂಗಯ್ಯ ಖಾತಾ ಮಾಡಿಕೊಡುವುದಾದರೆ ಲಂಚ ನೀಡುವಂತೆ ಒತ್ತಡ ಹಾಕುತ್ತಿದ್ದರು ಎಂದು ವೃದ್ಧೆ ನಿಂಗಮ್ಮ ಆರೋಪಿಸಿದರು.
1989ರಲ್ಲಿ ತಮ್ಮ ಪತಿ ಹೊನ್ನೇಗೌಡರಿಗೆ ಮಂಜೂರಾಗಿದ್ದ ನೀವೇಶನದ ಖಾತಾ ಮಾಡಿಕೊಡಲು ಕಳೆದ 19 ತಿಂಗಳ ಹಿಂದೆ ಸಕಾಲ ಯೋಜನೆಯಡಿ ಅರ್ಜಿಸಲ್ಲಿಸಿದ್ದರು.ಇದೂವರೆಗೂ ಖಾತೆ ಮಾಡಿಕೊಡದೆ ಹಲವು ನೆಪವೊಡ್ಡಿ ಖಾತಾ ಮಾಡಿಕೊಡುತ್ತಿಲ್ಲ ಎಂದು ತಮ್ಮ ಮೊಮ್ಮಗ ಆಶೋಕ್ ಜೊತೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
Comments