ಗುಜರಾತ್ ಚುನಾವಣೆಯ 2ನೇ ಹಂತ: ಮತ ಚಲಾಯಿಸಿದ ಮೋದಿ ತಾಯಿ

ಗುಜರಾತ್ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಗುಜರಾತ್ ವಿಧಾನಸಭಾ 182 ಸದಸ್ಯ ಬಲವನ್ನು ಹೊಂದಿದೆ. ಮೊದಲ ಹಂತದ ಚುನಾವಣೆ ಡಿ.9 ರಂದು ಮುಗಿದಿದ್ದು, ಇಂದು 2ನೇ ಹಾಗೂ ಕೊನೆಯ ಹಂತದ ಮತದಾನ ನಡೆಯುತ್ತಿದೆ.2ನೇ ಹಂತದಲ್ಲಿ ರಾಜಧಾನಿ ಅಹಮದಾಬಾದ್ ಸೇರಿ ಒಟ್ಟು 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿದ್ದು, 2.22 ಕೋಟಿ ಮತದಾರರಿದ್ದಾರೆ. ಕಣದಲ್ಲಿ 851 ಅಭ್ಯರ್ಥಿಗಳಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಬಿರುಸಿನಿಂದ ಸಾಗಿದೆ. ಶಂಕರ್ ಸಿನ್ಹಾ ವಘೇಲಾ ಸಹ ಗಾಂಧಿನಗರದ ವಾಸನ್ ಗ್ರಾಮದಲ್ಲಿ ಮತದಾನ ಮಾಡಿದರು. ಇತ್ತ, ಅಹಮದಾಬಾದ್ ವೇಜಾಲ್‌ಪುರ್‌ನಲ್ಲಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಕೂಡ ತಮ್ಮ ಮತ ಚಲಾಯಿಸಿದರು.
Comments