ಸಾಧನೆ ಶೂನ್ಯವಾಗಿದ್ದರೂ ಬಡಾಯಿಗೇನು ಕಡಿಮೆಯಿಲ್ಲ : ಎಚ್ ಡಿಕೆ

ಜೆಡಿಎಸ್ ಸಮಾವೇಶವೊಂದರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎಲ್ಲರೂ ಭ್ರಷ್ಟ ರಾಜಕಾರಣಿಗಳೇ. ಸಿಎಂ ಸಿದ್ದರಾಮಯ್ಯನವರನ್ನು ಹೊರತುಪಡಿಸಿ, ಉಳಿದವರೆಲ್ಲರೂ ಹಗರಣಗಳಲ್ಲಿ ಭಾಗಿಯಾದವರು ಎಂದು ಹೇಳಿದ್ದರು. ಇದನ್ನೇ ಭವಿಷ್ಯದ ಚುನಾವಣೆಗೆ ಸೂಕ್ತ ಅಸ್ತ್ರವನ್ನಾಗಿ ಬಳಸಿಕೊಂಡ ಸಿಎಂ ಸಿದ್ದರಾಮಯ್ಯರು, ನಾನು ಇತರರಂತೆ ಭ್ರಷ್ಟ ಸಿಎಂ ಅಲ್ಲ. ನನ್ನ ಅವಧಿಯಲ್ಲಿ ನಮ್ಮ ಸರಕಾರ ಮಾಡಿರುವ ಸಾಧನೆಗಳು ಹೆಚ್ಚಿವೆ. ಇತರೆ ಪಕ್ಷಗಳು ಸಮಾಜಕ್ಕಾಗಿ ಏನು ಮಾಡಿವೆ ಎಂದು ಹೇಳಿದ್ದರು.
ಈ ಮಾತಿಗೆ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಸಿಎಂ ಅವರನ್ನು ಟೀಕಿಸಿದ್ದಾರೆ. ನಾನು ಭ್ರಷ್ಟನಲ್ಲ ಎಂದು ಹೇಳಿಕೊಳ್ಳುವ ಸಿಎಂ ಅವರು ಜನರಿಗಾಗಿ ಮಾಡಿದ್ದಾದರೂ ಏನು? ಎಲ್ಲರೂ ಭ್ರಷ್ಟರು, ತಾವೊಬ್ಬರೇ ಸಾಚಾ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರೊಬ್ಬ ಹುಟ್ಟು ಭ್ರಷ್ಟ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಬೈದಿದ್ದನ್ನೇ, ಸಿಎಂ ಅವರು ಹೊಗಳಿದ್ದಾರೆ ಎಂದು ಹೇಳಿಕೊಂಡು ಓಡಾಡುತ್ತಾರೆ. ಸಾಧನೆ ಶೂನ್ಯವಾಗಿದ್ದರೂ ಬಡಾಯಿಗೇನು ಕಡಿಮೆಯಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
Comments