ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಬಂದ ಆದಾಯ ಎಷ್ಟು ಗೊತ್ತಾ?

ಹಿಂದೂ ಪುರಾಣ ಪ್ರಸಿದ್ದ ದೇವಾಲಯ ಕೇರಳದಲ್ಲಿರುವ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಕೋಟ್ಯಾಂತರ ರೂ. ಆದಾಯ ಹರಿದುಬಂದಿದೆ.ಕಳೆದ ವರ್ಷಕ್ಕಿಂತ ಈ ವರ್ಷ ದೇವಸ್ಥಾನಕ್ಕೆ ಬರುತ್ತಿರುವ ಆದಾಯಲ್ಲಿ ಅಧಿಕವಾಗಿದೆ. 25 ದಿನಗಳಲ್ಲಿ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಬರೊಬ್ಬರಿ 101 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 86 ಕೋಟಿ ರೂ. ಸಂಗ್ರಹವಾಗಿತ್ತು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಈ ಅವಧಿಯಲ್ಲಿ ಪಾಯಸಂ ಮಾರಾಟದ ಮೂಲಕ 44 ಕೋಟಿ ರೂ. ಮತ್ತು ಹುಂಡಿಗೆ ಭಕ್ತರು ಹಾಕಿದ ಕಾಣಿಕೆಯಿಂದ 35 ಕೋಟಿ ರೂ. ಮತ್ತು ಇತರೆ ಮೂಲಗಳಿಂದ 22 ಕೋಟಿ ರೂ. ಆದಾಯ ಸಂಗ್ರಹವಾಗಿದೆ.ಅಯ್ಯಪ್ಪ ದೇಗುಲದಲ್ಲಿ 2 ತಿಂಗಳ ಅವಧಿಯಲ್ಲಿ ಉತ್ಸವ ಕಾರ್ಯಕ್ರಮಗಳು ಪ್ರತಿ ವರ್ಷ ನಡೆಯುತ್ತವೆ. ಈ ವರ್ಷ ನವೆಂಬರ್ 16ರಿಂದ ಉತ್ಸವ ಆರಂಭವಾಗಿದ್ದು, ದೇಶದ ಮೂಲೆ-ಮೂಲೆಗಳಿಂದ ಭಕ್ತರು ಅಯ್ಯಪ್ಪನ ದರ್ಶನ ಪಡೆಯುಲು ಕೇರಳದ ಶಬರಿಮಲೆಗೆ ಬರುತ್ತಾರೆ. ಈ ಬಾರಿಯ ಶಬರಿಮಲೆ ಉತ್ಸವಕ್ಕೆ ಉಗ್ರರ ಭೀತಿ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರು, ಭಕ್ತರು ಮತ್ತು ಅದ್ಯಾವುದನ್ನು ಲೆಕ್ಕಿಸದೆ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದಾರೆ. ಶಬರಿಮಲೆ ದೇವಾಲಯದ ವಿರುದ್ಧ ದಿಕ್ಕಿನಲ್ಲಿರುವ ಪೊನ್ನಂಬಲಮೇಡು ಗಿರಿಯಲ್ಲಿ, ಪ್ರತಿವರ್ಷ ಜನವರಿ 14ರಂದು ಅಯ್ಯಪ್ಪ ಸ್ವಾಮಿಗೆ ಸಂಜೆಯ ಮಹಾಮಂಗಳಾರತಿ ಬಳಿಕ ಮಕರ ಜ್ಯೋತಿಯ ದರ್ಶನವಾಗುತ್ತದೆ.
Comments