'1 ರುಪಾಯಿ' ಏರ್ ಡೆಕ್ಕನ್ ವಿಮಾನ ಯಾನ ಮತ್ತೆ ಆರಂಭ

ಭಾರತೀಯರಿಗೆ ಅತ್ಯಂತ ಕಡಿಮೆ ಪ್ರಯಾಣ ದರದಲ್ಲಿ ದೇಶೀಯ ವಿಮಾನ ಯಾನದ ಕನಸು ಬಿತ್ತಿದ್ದು ಏರ್ ಡೆಕ್ಕನ್. ಇದೀಗ ಮತ್ತೆ ತನ್ನ ಕಾರ್ಯಾಚರಣೆ ಆರಂಭಿಸಲು ಎಲ್ಲ ಸಿದ್ಧತೆ ನಡೆಸಿದೆ.
2003ರಲ್ಲಿ ಏರ್ ಡೆಕ್ಕನ್ ಆರಂಭಿಸಿದ್ದು ಜಿ.ಆರ್.ಗೋಪಿನಾಥ್. 2008ರಲ್ಲಿ ಅದು ವಿಜಯ್ ಮಲ್ಯರ ಕಿಂಗ್ ಫಿಷರ್ ಏರ್ ಲೈನ್ಸ್ ಜತೆಗೆ ವಿಲೀನವಾಯಿತು. ಆ ನಂತರ ಹಣಕಾಸು ಸಮಸ್ಯೆಯ ಕಾರಣಕ್ಕೆ 2012ರಿಂದ ತನ್ನ ಕಾರ್ಯಾಚರಣೆಯನ್ನೇ ನಿಲ್ಲಿಸಿತು. ಇದೀಗ ಎರಡನೇ ಬಾರಿ ನಭಕ್ಕೆ ಹಾರಲು ಸಿದ್ಧವಾಗಿದೆ ಏರ್ ಡೆಕ್ಕನ್.
ಮುಂಬೈ, ದೆಹಲಿ, ಕೋಲ್ಕತ್ತಾ ಹಾಗೂ ಶಿಲ್ಲಾಂಗ್ ನಿಂದ ಚಟುವಟಿಕೆ ಆರಂಭಿಸಲಿರುವ ಏರ್ ಡೆಕ್ಕನ್, ಸಮೀಪದ ನಗರಗಳಿಗೆ ಹಾರಾಟ ಆರಂಭಿಸಲಿದೆ. ಇದೇ ಡಿಸೆಂಬರ್ 22ರಂದು ನಾಸಿಕ್ ನಿಂದ ಮುಂಬೈಗೆ ಏರ್ ಡೆಕ್ಕನ್ ನ ವಿಮಾನ ಹಾರಾಟ ನಡೆಸಲಿದೆ ಎಂದು ಬೆಂಗಳೂರಿನ ನಿವಾಸಿಯಾದ ಗೋಪಿನಾಥ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
Comments