ಸುಪಾರಿ ಕೊಟ್ಟ ರವಿ ಬೆಳಗೆರೆ ಕನ್ನಡದ ಸನ್ನಿ ಲಿಯೋನ್ : ಅಗ್ನಿಶ್ರೀಧರ್

'ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ರವಿ ಬೆಳಗೆರೆ ಕನ್ನಡದ ಸನ್ನಿ ಲಿಯೋನ್. ಅವರು ಪತ್ರಿಕಾ ರಂಗವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕೇವಲ ಲೈಂಗಿಕತೆ ಮತ್ತು ಹಿಂಸೆ ಅವರ ಸಾಹಿತ್ಯದಲ್ಲಿ ಮೇಳೈಸಿವೆ' ಎಂದು ಪತ್ರಕರ್ತ ಅಗ್ನಿಶ್ರೀಧರ್ ಹೇಳಿದ್ದಾರೆ.
ಪತ್ರಿಕಾರಂಗ ರವಿ ಬೆಳೆಗೆರೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಪಾಪಿಗಳ ಲೋಕ ಅವರಿಗೆ ಹೆಸರು ತಂದುಕೊಟ್ಟಿತು. ಸೆಕ್ಸ್ ಮತ್ತು ಕ್ರೈಮ್ ನಿಂದ ಗುಂಪುಗಳ ಮಧ್ಯೆ ವೈಷಮ್ಯ ಬೆಳೆಸುತ್ತಿದ್ದರು. ಬಚ್ಚನ್ ಮತ್ತು ರಾಜೇಂದ್ರ ಅವರ ಕಡೆಯಿಂದ ರವಿ ಬೆಳೆಗೆರೆ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಅವರು ಶಿಸ್ತಿಲ್ಲದ ಜೀವನ ನಡೆಸುತ್ತಿದ್ದರು. ಬಲರಾಮ ಅವರ ಒತ್ತಾಯದ ಮೇರೆಗೆ ನಾನು ಬೆಳಗೆರೆ ಅವರನ್ನು ಭೇಟಿಮಾಡಿದೆ. ಒಂದೊಂದು ಕ್ಷಣಕ್ಕೆ ಒಂದೊಂದು ಮಾತು ಆಡುವ ರವಿ ಅವರ ಮಾತು ನನಗೆ ಅಸಹ್ಯ ಹುಟ್ಟಿಸುತ್ತಿತ್ತು ಎಂದು ರವಿ ಬೆಳೆಗೆರೆ ಮತ್ತು ತಮ್ಮ ನಡುವಿನ ಒಡನಾಟವನ್ನು ಸ್ಮರಿಸಿದರು.
Comments