ಈ ಯುವಕನಿಗೊಂದು ಸಲಾಂ
ಅಮೆರಿಕದ ಕಂಪನಿ ಮತ್ತು ಐಐಎಂ ಇಂಧೋರ್ ನ ಆಫರ್ ತಿರಸ್ಕರಿಸಿದ ಕೂಲಿ ಕಾರ್ಮಿಕನ ಮಗ ಬರ್ನಾನ್ ಯಾದಗಿರಿ ಭಾರತೀಯ ಸೇನೆ ಸೇರಿದ್ದು ಲಕ್ಷಾಂತರ ಯುವಕರಿಗೆ ಆದರ್ಶವಾಗಿದ್ದಾರೆ. ಬರ್ನಾನ್ ಯಾದಗಿರಿ ಮನಸ್ಸು ಮಾಡಿದ್ದರೆ ಅಮೆರಿಕದಲ್ಲಿ ಲಕ್ಷಾಂತರ ರುಪಾಯಿ ಸಂಬಳದ ಉದ್ಯೋಗ ಪಡೆಯಬಹುದಿತ್ತು. ಆದರೆ ಆತನ ಮನಸ್ಸು ಮಿಡಿಯುತ್ತಿದ್ದದ್ದು ದೇಶಸೇವೆಗಾಗಿ. ಹೀಗಾಗಿ ಸಿಗಲಿದ್ದ ಎಲ್ಲಾ ಐಶ್ವರ್ಯವನ್ನು ಬಿಟ್ಟು ಸೇನೆ ಸೇರಿದ್ದಾರೆ.
ಬರ್ನಾನ್ ಯಾದರಿಗಿರಿ ತಂದೆ ಗುನ್ನಯ್ಯ ಹೈದರಾಬಾದ್ ನಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಸಿಮೆಂಟ್ ಫ್ಯಾಕ್ಟರಿಯಲ್ಲಿ ದಿನಗೂಲಿ ನೌಕರರಾಗಿದ್ದು ದಿನಕ್ಕೆ 100 ರೂ ಕೂಲಿ ಪಡೆಯುತ್ತಿದ್ದಾರೆ. ತಾಯಿ ಪೋಲಿಯೋ ಪೀಡಿತೆಯಾಗಿದ್ದು ಮನೆಯಲ್ಲಿನ ಕಡುಬಡತನದಿಂದ ಖರ್ಚುಗಳನ್ನು ಸರಿದೂಗಿಸಲು ಸ್ಥಳೀಯ ಕಚೇರಿಗಳಲ್ಲಿ ಮೇಜು ಒರೆಸುವುದು ಗುಡಿಸುವುದು ಮಾಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲೂ ಬರ್ನಾನ್ ಯಾದಗಿರಿ ಸೇನೆಗೆ ಸೇರಲು ನಿರ್ಧರಿಸಿರುವುದು, ನಿಜಕ್ಕೂ ಆತನ ಭಾರತೀಯ ಸೇನೆ ಮೇಲಿರುವ ಅಪಾರ ಗೌರವ ಕಾರಣವಾಗಿದೆ.
Comments