ಸಿಎಂ ಸಿದ್ದರಾಮಯ್ಯ ಗೆ ಟಾಂಗ್ ಕೊಟ್ಟ ದೇವೇಗೌಡ್ರು

ಜೆಡಿಎಸ್ ಸಮಾವೇಶದಲ್ಲಿ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ನಮ್ಮ ನಿರೀಕ್ಷೆ ಮೀರಿ ಜನ ಸೇರಿದ್ದೀರಿ. ನಮ್ಮ ಪಕ್ಷವನ್ನು ನಾಮಾವಶೇಷ ಮಾಡ್ತೀವಿ ಅಂತಾ ಕೆಲವರು ಹೇಳಿದ್ದಾರೆ. ಅಂತವರಿಗೆ ಉತ್ತರ ಕೊಡಬೇಕು ಅಂತಾ ತುಮಕೂರಿನಲ್ಲಿ ಸಮಾವೇಶ ಏರ್ಪಡಿಸಲಾಯಿತು ಎಂದಿದ್ದಾರೆ.
ಇಲ್ಲಿ ರಾಷ್ಟ್ರದ ಹಿರಿಯ ಮುಸ್ಲಿಂ ನಾಯಕರಾದ ಫಾರುಕ್ ಅಬ್ದುಲ್ಲಾ ಭಾಗವಹಿಸಿದ್ದು ನಮ್ಮ ಶಕ್ತಿ. ಜನತಾದಳ ನಮ್ಮ ಶಕ್ತಿಯಿಂದಲೇ ಅಧಿಕಾರಕ್ಕೆ ಬರಬೇಕು ಅಂತಾ ಸಾಕಷ್ಟು ಕೆಲಸ ಮಾಡಿದ್ದೆವು. 1984 ರಲ್ಲಿ ನಮ್ಮ ಪಕ್ಷದ ಅಧ್ಯಕ್ಷರಾಗಬೇಕು ಎಂದು ಫಾರುಕ್ ಅಬ್ದುಲ್ಲಾರನ್ನು ಕೇಳಿಕೊಂಡಿದ್ದೆವು. ಮುಸಲ್ಮಾನರ ಪರಿಸ್ಥಿತಿ ಹೇಗಿದೆ? ಶಾಂತಿಯ ಪರಿಸ್ಥಿತಿ ಇದೆಯಾ? ಇವತ್ತಿನ ತನಕ ಈದ್ಗಾ ಮೈದಾನದ ಸಮಸ್ಯೆ ಬಗೆಹರಿಸಲು ರಾಷ್ಟ್ರೀಯ ಪಕ್ಷಗಳು ಮುಂದಾಗಿರಲಿಲ್ಲ. ನಮಗೆ ಬಹುಮತ ಬರದಿದ್ದರೆ ಬಿಜೆಪಿ ಜೊತೆ ಹೋಗುತ್ತಾರೆ ಅಂತಾ ಹೇಳ್ತಾರೆ. ಆ ಬಗ್ಗೆ ಇಂದು ತೀರ್ಮಾನ ಆಗಬೇಕಿದೆ ಎಂದು ದೇವೇಗೌಡರು ಹೇಳಿದ್ದಾರೆ.
ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದರು. ಅದಕ್ಕೆ ಕಾರಣ ಯಾರು? ಈಗ ಮುಖ್ಯಮಂತ್ರಿ ಆಗಿರುವವರು ಅವತ್ತು ನಮ್ಮ ಪಕ್ಷದ ನಾಯಕರಾಗಿದ್ದರು. ಅವರು ಉತ್ತರ ಕೊಡಲಿ ಎಂದು ಸಿದ್ದರಾಮಯ್ಯ ಬಗ್ಗೆ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.ಅವರು ಇಂದು ನಮ್ಮ ಪಕ್ಷದಲ್ಲಿ ಇಲ್ಲ. ಯಾಕೆ ಬಿಟ್ಟು ಹೋದರು ಅವರೇ ಹೇಳಬೇಕು. ಅವರನ್ನು ನಾನು ಸಿಎಂ ಮಾಡಬೇಕಿತ್ತಂತೆ. ಅದಕ್ಕೆ ನಾನು ಏನೆಲ್ಲ ಪ್ರಯತ್ನ ಮಾಡಿದ್ದೆ. ಅದೆಲ್ಲ ನಾನು ಈಗ ಮಾತಾಡಲ್ಲ. ಸಿಎಂ ಮಾಡಲಿಲ್ಲ ಅಂತಾ ಸಿದ್ದರಾಮಯ್ಯ ಪಕ್ಷ ತ್ಯಜಿಸಿದರು ಅಂತ ಪರೋಕ್ಷವಾಗಿ ದೇವೇಗೌಡರು ಟಾಂಗ್ ನೀಡಿದ್ದಾರೆ.
Comments