ಮೃತ ರೈತ ಕುಟುಂಬಕ್ಕೆ 50 ಸಾವಿರ ಸಹಾಯಧನ ನೀಡಿದ ನಿಖಿಲ್ ಕುಮಾರಸ್ವಾಮಿ

ಇತ್ತೀಚೆಗೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ದೊಡ್ಡ ಬಾಣಸವಾಡಿ ಗ್ರಾಮದ ರೈತ ಸುನಿಲ್ ಬಾಬು ಮನೆಗೆ ನಟ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ 50 ಸಾವಿರ ರೂ. ಸಹಾಯಧನ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ತಂದೆ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಖುದ್ದು ಅವರೇ ಭೇಟಿ ನೀಡಲಿದ್ದಾರೆ ಎಂದು ನಿಖಲ್ ತಿಳಿಸಿದರು.ನಾನು ಪ್ರಜ್ವಲ್ ಚೆನ್ನಾಗಿಯೇ ಇದ್ದೇವೆ. ನಾವು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ನಮ್ಮ ಪಕ್ಷದ ಪರವಾಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತೇವೆ. ನನ್ನ ಅಗತ್ಯವಿರುವ ಕಡೆಗಳಲ್ಲಿ ಅಪ್ಪ ಕುಮಾರಸ್ವಾಮಿ ಅವರು ಮತ್ತು ತಾತ ಎಚ್.ಡಿ.ದೇವೇಗೌಡರು ಹೇಳಿದ ಕೆಲಸಗಳನ್ನು ಮಾಡುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Comments