ಎಚ್ ಡಿಕೆ ಅಭಿಮಾನಿಯಿಂದ ಕುಮಾರಣ್ಣ ಎಳನೀರು ಕ್ಯಾಂಟೀನ್
ಮಾಜಿ ಸಿಎಂ ಕುಮಾರಸ್ವಾಮಿ ಅವರ ಅಭಿಮಾನಿಯೊಬ್ಬರು ಕುಮಾರಣ್ಣ ಎಳನೀರು ಕ್ಯಾಂಟೀನ್ ಆರಂಭಿಸಿದ್ದಾರೆ.ಇತ್ತೀಚಗಷ್ಟೇ ಇದೀಗ ಬೆಂಗಳೂರು ದಕ್ಷಿಣ ತಾಲೂಕಿನ ಮಂಡೂರು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿರುವ ಅಂಚರಹಳ್ಳಿಯ ಮುನಿಶಾಮಪ್ಪ ಅವರು ಎಳನೀರು ಕ್ಯಾಂಟೀನ್ ಆರಂಭಿಸಿದ್ದಾರೆ.
ಹಳೆ ಸ್ಕೂಟರ್ ಗೆ ಬಂಡಿ ಕಟ್ಟಿಕೊಂಡು ಎಳನೀರು ಮಾರುತ್ತ ಕುಮಾರಸ್ವಾಮಿ ಸಾಧನೆಗಳ ಮತ್ತು ಜೆಡಿಎಸ್ ಕಾರ್ಯಕ್ರಮಗಳ ಕುರಿತು ಜನರಿಗೆ ವಿವರಿಸುತ್ತಿದ್ದಾನೆ. ಅಂದಹಾಗೆ ಎರಡು ಎಳನೀರು ತೆಗೆದುಕೊಂಡರೆ ಮಾತ್ರ 10 ರೂ. ರಿಯಾಯತಿ ನೀಡುತ್ತಿದ್ದಾನೆ.ಮೂಲತಃ ಕೃಷಿಕ ಕುಟುಂಬದ ಈತ 5 ವರ್ಷಗಳಿಂದ ಎಳನೀರು ವ್ಯಾಪಾರ ಮಾಡುತ್ತಿದ್ದಾನೆ. ಬೇರೆಯವರ ತೋಟದಿಂದ ಎಳನೀರು ಖರೀದಿಸುತ್ತಾನೆ. ದಿನಕ್ಕೆ ಸುಮಾರು 100 ಎಳನೀರು ಮಾರಾಟವಾಗುತ್ತವೆ. ಬಂದ ಲಾಭದಲ್ಲಿ ಜೀವನ ನಡೆಸುವುದರ ಜೊತೆಗೆ ಜೆಡಿಎಸ್ ಪರ ಪ್ರಚಾರ ಕೂಡ ಮಾಡುತ್ತಿದ್ದಾನೆ.
Comments