ಆಲಮೇಲಮ್ಮನ ಶಾಪಕ್ಕೆ ಹನುಮಗಿರಿ ಆಂಜನೇಯನಿಂದ ಮುಕ್ತಿ

08 Dec 2017 1:04 PM | General
308 Report

ನವೆಂಬರ್‌ 2 ರಂದು ಹನುಮಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಯದುವೀರ್‌ ಅವರು, ಪತ್ನಿ ತ್ರಿಷಿಕಳ ಆರೋಗ್ಯ, ಪುತ್ರ ಸಂತಾನದ ವಿಚಾರವಾಗಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ತ್ರಿಷಿಕ ಅವರಿಗೆ ಗಂಡು ಮಗು ಜನಿಸಿದ್ದು, ಒಡೆಯರ್‌ ಕುಟುಂಬಕ್ಕೆ ಇದ್ದ ಆಲಮೇಲಮ್ಮನ ಶಾಪಕ್ಕೆ ಹನುಮಗಿರಿ ಆಂಜನೇಯ ಮುಕ್ತಿ ನೀಡಿದ್ದಾನೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಮೈಸೂರು ಮಹಾರಾಜ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್‌ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರ ಮಂಗಲದ ಹನುಮಗಿರಿ ಪಂಚಮುಖಿ ಆಂಜನೇಯನ ಕೃಪೆ ಇದೆ ಎನ್ನುವ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ. ಈ ಹಿಂದೆ ಮಹಾರಾಣಿ ಪ್ರಮೋದಾದೇವಿ ಹಾಗೂ ಪತ್ನಿ ತ್ರಿಷಿಕ ಅವರೊಂದಿಗೆ ಹನುಮಗಿರಿ ಕ್ಷೇತ್ರಕ್ಕೆ ಯದುವೀರ್‌ ಕೃಷ್ಣ ದತ್ತ ಒಡೆಯರ್‌ ಭೇಟಿ ನೀಡಿದ್ದರು. 

Edited By

Hema Latha

Reported By

Madhu shree

Comments