ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನೌಕರರಿಗೆ ಗುರುತಿನ ಚೀಟಿಯನ್ನೇ ಕೊಟ್ಟಿಲ್ಲ

ಸಾಮಾನ್ಯವಾಗಿ ಯಾವುದೇ ಸಣ್ಣಪುಟ್ಟ ಕಂಪನಿಗೆ ಕೆಲಸಕ್ಕೆ ಸೇರಿದರೆ ಐಡಿ ಕಾರ್ಡ್ ನೀಡುವುದು ಕಾಮನ್. ಆದರೆ ಪ್ರಯಾಣಿಕರ ಹಾಗೂ ಸಿಬ್ಬಂದಿ ಹಿತಾಸಕ್ತಿ ಕಾಪಾಡುವುದೇ ನಮ್ಮ ಧ್ಯೇಯ ಎನ್ನುವ ನಿಗಮ, ತನ್ನ ಸಂಸ್ಥೆಗಳಲ್ಲಿ ಉಚಿತವಾಗಿ ಓಡಾಡೋಕೆ ಪಾಸ್ ಒಂದನ್ನು ನೀಡಿರುವುದು ಬಿಟ್ಟರೆ ಮತ್ಯಾವ ರೀತಿಯ ಗುರುತಿನ ಚೀಟಿಯನ್ನೂ ನೀಡಿಲ್ಲ.
ಇನ್ನು, ಸಾಲ ಪಡೆಯಬೇಕು ಡಿಪೋಗಳಲ್ಲಿ ಅಧಿಕೃತ ಸೀಲ್ ಹಾಕಿರುವ ಪತ್ರ ನೀಡಿ ಎಂದರೂ ಅಧಿಕಾರಿಗಳು ನೀಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಸಾರಿಗೆ ಸಚಿವ ರೇವಣ್ಣರನ್ನು ಕೇಳಿದರೆ ಇದೆಲ್ಲಾ ದೊಡ್ಡ ವಿಚಾರ ಅಲ್ಲ ಬಿಡಿ ಎಂದು ಉಡಾಫೆ ಉತ್ತರ ನೀಡುತ್ತಾರೆ ಎನ್ನುವುದು ಸಿಬ್ಬಂದಿ ಅಳಲು.
Comments