ನೀಲಿ ಚಿತ್ರದ ರಾಣಿ 'ಸನ್ನಿ' ಬೆಂಗಳೂರಿಗೆ ಬರೋದು ಬೇಡ
ಟೈಮ್ಸ್ ಕ್ರಿಯೇಷನ್‍ನಿಂದ `ಸನ್ನಿ ನೈಟ್ಸ್’ ಹೊಸ ವರ್ಷದ ಕಿಕ್ ಕಾರ್ಯಕ್ರಮಕ್ಕೆ ಕರವೇ ಕ್ಯಾತೆ ತೆಗೆದಿದೆ. ಸನ್ನಿ ಸೀರೆ ಉಟ್ಟುಕೊಂಡು ಬಂದು ಕಾರ್ಯಕ್ರಮ ನಡೆಸಲಿ ಅಂತಾ ಕರವೇ ಯುವ ಸೇನೆ ಸವಾಲು ಹಾಕಿದೆ. ಇದರ ಜೊತೆಗೆ ಕಾರ್ಯಕ್ರಮದ ಆಯೋಜಕರಿಗೆ ಹಾಗೂ ಕಮೀಷನರ್‍ಗೆ ಸನ್ನಿ ಲಿಯೋನ್ ಕಾರ್ಯಕ್ರಮ ರದ್ದು ಮಾಡುವಂತೆ ಮನವಿ ಕೊಡೋದಾಗಿ ಹೇಳಿದ್ದಾರೆ.
ಸನ್ನಿ ಕಾರ್ಯಕ್ರಮ ನಡೆಸಿದ್ರೆ ಕಪ್ಪು ಬಾವುಟ ಹಾರಿಸೋದಾಗಿ ಕರವೇ ಯುವ ಸೇನೆ ರಾಜ್ಯಾಧ್ಯಕ್ಷ ಪ್ರೇಮ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.'ಮೋಜು ಮಸ್ತಿ ಮಾಡಲಿಕ್ಕೆ ನಮ್ಮ ಕರ್ನಾಟಕವನ್ನು ಉತ್ತರ ಭಾರತದವರು ನಮ್ಮ ಕರ್ನಾಟಕದಲ್ಲಿ ಕನ್ನಡಿಗರನ್ನು ಕಡೆಗಣಿಸುತ್ತಿದ್ದಾರೆ. ಸನ್ನಿಲಿಯೋನ್ ಎಂಬಾಕೆ ನಮ್ಮ ಭಾರತದವರೇ ಅಲ್ಲ. ನಮ್ಮ ಸಂಸ್ಕೃತಿಯ ಗಂಧನೇ ಗೊತ್ತಿಲ್ಲದ ಇಂತಹ ನೀಲಿ ಚಿತ್ರಗಳ ರಾಣಿ ಸನ್ನಿನೈಟ್ ಕಾರ್ಯಕ್ರಮವನ್ನು ಕರವೇ ಯುವ ಸೇನೆ ಖಂಡಿಸುತ್ತದೆ. ಕಾರ್ಯಕ್ರಮವನ್ನು ವಿರೋಧಿಸಿ ಇದೇ 7ರಂದು ಶೇಷಾದ್ರಿಪುರಂ ಕಂಪೆನಿ ಮುಂಭಾಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಿದ್ದೇವೆ' ಎಂದು ಕರವೇ ರಾಜ್ಯಾಧ್ಯಕ್ಷ ಹರೀಶ್ ಹೇಳಿದ್ದಾರೆ.
Comments