ಸೆಲ್ಫಿ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ನಟನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು

'ನಾಗಿಣಿ' ಧಾರಾವಾಹಿ ನಟ ದೀಕ್ಷಿತ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಪಲ್ಸರ್ ಬೈಕ್ ನಲ್ಲಿ ಹಿಂಬಾಲಿಸಿ ಬಂದಿದ್ದ ಮೂವರು ಸೆಲ್ಫಿ ತೆಗೆದುಕೊಳ್ಳಲು ದೀಕ್ಷಿತ್ ಅವರಿಗೆ ಬಲವಂತ ಮಾಡಿದ್ದು, ಇದಕ್ಕೆ ದೀಕ್ಷಿತ್ ನಿರಾಕರಿಸಿದ್ದಾರೆ. ಮದ್ಯದ ಅಮಲಿನಲ್ಲಿ ಅವಾಚ್ಯವಾಗಿ ನಿಂದಿಸಿದ ದುಷ್ಕರ್ಮಿಗಳು, ದೀಕ್ಷಿತ್ ಅವರ ಕಾರಿನ ಗಾಜು ಒಡೆದು ಹಾಕಿದ್ದಾರೆ.
ಸೆಲ್ಫಿ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ, ನಟರೊಬ್ಬರ ಮೇಲೆ ದಾಳಿ ನಡೆಸಿದ ಘಟನೆ ಬೆಂಗಳೂರು ವಿಜಯನಗರದ ಮಾರುತಿ ಮಂದಿರದ ಬಳಿ ನಡೆದಿದೆ. ದೀಕ್ಷಿತ್ ವಿಜಯನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
Comments