ಗಂಗಾವತಿಯ ಕಲ್ಲುಮಠದ ಕೊಟ್ಟೂರೇಶ್ವರ ಸ್ವಾಮೀಜಿ ಕಾಮಪುರಾಣ ಬಯಲು

'ಗಂಗಾವತಿಯ ಕಲ್ಲುಮಠದ ಕೊಟ್ಟೂರೇಶ್ವರ ಸ್ವಾಮೀಜಿ ಅವರು ರಾಸಲೀಲೆಯಲ್ಲಿ ತೊಡಗಿದ್ದು, ಮಠವು ಅನೈತಿಕ ಚಟುವಟಿಕೆಗಳ ತಾಣವಾಗಿದೆ’ ಎಂದು ಅವರ ಕಾರು ಚಾಲಕ ಮಲ್ಲಯ್ಯ ಸ್ವಾಮಿ ಆರೋಪಿಸಿದ್ದಾರೆ.
ಲಾಡ್ಜ್‌ನ ಕೊಠಡಿಯಲ್ಲಿ ಮಹಿಳೆಯೊಂದಿಗೆ ಸ್ವಾಮೀಜಿ ಇದ್ದಾರೆ ಎನ್ನಲಾಗಿರುವ ವಿಡಿಯೊ ತುಣುಕುಗಳನ್ನು ಮಲ್ಲಯ್ಯ ಸ್ವಾಮಿ ಬಹಿರಂಗಗೊಳಿಸಿದ್ದಾರೆ. ‘ಈ ವಿಚಾರದಲ್ಲಿ ಸ್ವಾಮೀಜಿ ನನಗೆ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಅವರು ದೂರಿದ್ದಾರೆ. ಚಾಲಕ ಮಲ್ಲಯ್ಯ ಮತ್ತು ಸ್ವಾಮೀಜಿ ನಡುವೆ ಉಂಟಾದ ಭಿನ್ನಾಭಿಪ್ರಾಯ ಹಾಗೂ ಸ್ವಾಮೀಜಿ, ಮಲ್ಲಯ್ಯ ಅವರನ್ನು ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಒಡ್ಡಿದ್ದು ಪ್ರಕರಣ ಬಯಲಾಗಲು ಕಾರಣ ಎಂದು ಮೂಲಗಳು ಮಾಹಿತಿ ನೀಡಿವೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೊಟ್ಟೂರೇಶ್ವರ ಸ್ವಾಮೀಜಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಸ್ವಾಮೀಜಿ ಸಂಪರ್ಕಕ್ಕೆ ಸಿಗಲಿಲ್ಲ.
Comments