'ಜಿಮ್ಕಿ ಕಮ್ಮಲ್' ಹಾಡಿಗೆ ಜಾಕಿ ಚಾನ್ ಸಖತ್ ಡಾನ್ಸ್
ಇದೀಗ ಹಾಲಿವುಡ್ ನಟ, ಆ್ಯಕ್ಷನ್ ಹೀರೊ ಜಾಕಿ ಚಾನ್ ನ 'ಜಿಮ್ಕಿ ಕಮ್ಮಲ್' ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಜಾಕಿ ಚಾನ್ ನೃತ್ಯದ ಕುಂಗ್ಫು ಯೋಗ ಚಿತ್ರದ ಹಾಡೊಂದಕ್ಕೆ ಈ ಹಾಡನ್ನು ಎಡಿಟ್ ಮಾಡಲಾಗಿದೆ. ಜಾಕಿ ಚಾನ್ ನೃತ್ಯದ ಈ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ.
ಮಲಯಾಳಂ ನಟ ಮೋಹನ್ ಲಾಲ್ ಅಭಿನಯದ ಇತ್ತೀಚೆಗೆ ಬಿಡುಗಡೆಯಾಗಿರುವ ‘ವೆಲಿಪಡಿಂಟೆ ಪುಸ್ತಕಮ್’ ಸಿನಿಮಾದಲ್ಲಿನ ಜಿಮ್ಕಿ ಕಮ್ಮಲ್ ಹಾಡನ್ನು ನೀವು ಕೇಳಿಯೇ ಇರುತ್ತೀರಾ. ಎಲ್ಲೆಡೆ ಬರೀ ಜಿಮ್ಕಿದ್ದೇ ಹವಾ. ಆಫೀಸ್, ಮದುವೆ ಸಮಾರಂಭ, ಶಾಲೆಗಳಲ್ಲಿ, ಹೀಗೆ ಎಲ್ಲೆಡೆ ಅದೇ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವುದು ಕಂಡುಬರುತ್ತಿದೆ. ಅಲ್ಲದೇ ಜಿಮ್ಕಿ ಕಮ್ಮಲ್ ಹಾಡಿನ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗುತ್ತಿದೆ.
Comments