ವಕೀಲರ ಶುಲ್ಕ ನಿಯಂತ್ರಿಸಲು ಕಾಯ್ದೆ ರಚಿಸುವಂತೆ ಸುಪ್ರೀಂಕೋರ್ಟ್ ನಿಂದ ಕೇಂದ್ರಕ್ಕೆ ಸಲಹೆ

ಕೆಲವು ಪ್ರಕರಣಗಳು ಇತ್ಯರ್ಥವಾಗಲು ಬಹಳ ವರ್ಷಗಳು ತೆಗೆದುಕೊಳ್ಳುವುದರಿಂದ ಹಾಗೂ ವಕೀಲರಿಗೆ ಅಧಿಕ ಶುಲ್ಕ ನೀಡಬೇಕಿರುವುದರಿಂದ, ಈ ವಿಚಾರ ಪ್ರಚಲಿತ. ಇದೇ ವಿಷಯವಾಗಿ ಸುಪ್ರೀಂ ಕೋರ್ಟ್ ಸಹ ಕಳವಳ ವ್ಯಕ್ತಪಡಿಸಿದ್ದು, ವಕೀಲರ ಶುಲ್ಕವನ್ನು ನಿಯಂತ್ರಿಸಲು ಕಾಯ್ದೆ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ಪ್ರಕರಣವೊಂದರ ವಿಚಾರಣೆ ನಡೆಸುವ ವೇಳೆಯಲ್ಲಿ ನ್ಯಾಯಮೂರ್ತಿ ಆದರ್ಶ್ ಕೆ. ಗೋಯಲ್ ಮತ್ತು ಯು.ಯು. ಲಲಿತ್ ಕಾನೂನು ವೃತ್ತಿಯಲ್ಲಿ ನೈತಿಕತೆಯನ್ನು ಉಳಿಸಲು ಮತ್ತು ಬಡವರಿಗೆ ನ್ಯಾಯ ಸುಲಭವಾಗಿ ಸಿಗುವಂತಾಗಲು ಕೇಂದ್ರ ಮಧ್ಯ ಪ್ರವೇಶಿಸಬೇಕು. ವಕೀಲರ ಶುಲ್ಕದ ಕನಿಷ್ಠ ಮಿತಿ ಮತ್ತು ಗರಿಷ್ಠ ಮಿತಿಯನ್ನು ನಿಗದಿಪಡಿಸಲು ಕಾನೂನು ರಚಿಸಬೇಕು ಎಂದು ತಿಳಿಸಿದೆ. ವಕೀಲರು ತಮ್ಮ ಕಕ್ಷೀದಾರರಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ, ಅಲ್ಲದೆ ಕಕ್ಷೀದಾರರಿಗೆ ಸಿಗುವ ಪರಿಹಾರದಲ್ಲಿ ಪಾಲು ಕೇಳುತ್ತಿದ್ದಾರೆ. ಇದರಿಂದ ಬಡ ಕಕ್ಷೀದಾರರಿಗೆ ತೊಂದರೆಯಾಗುತ್ತಿದೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿತು.
Comments