ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಬಂಧನ
ಗೌರಿ ಲಂಕೇಶ್ ಹತ್ಯೆ ಘಟನೆ ನಡೆದು 3 ತಿಂಗಳಾಗಿದ್ದರೂ, ಇದುವರೆಗೂ ಹಂತಕರು ಪತ್ತೆಯಾಗಿಲ್ಲ. ಇದನ್ನು ಪ್ರತಿಭಟಿಸಿ ಗೌರಿ ಲಂಕೇಶ್ ಬಳಗ ಇಂದು ಪ್ರತಿಭಟನೆ ನಡೆಸುವಾಗ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್, ಸಾಹಿತಿ ಚಂದ್ರಶೇಖರ್ ಪಾಟೀಲ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ಯೆ ತನಿಖೆ ಚುರುಕುಗೊಳಿಸುವ ಕುರಿತಂತೆ ಲಂಕೇಶ್ ಬಳಗ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲು ತೆರಳುತ್ತಿದ್ದಾಗ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಬ್ಯಾರಿಕೇಡ್ ತಳ್ಳಿಹಾಕಿ ಸಿಎಂ ಮನೆಯತ್ತ ಮುನ್ನುಗ್ಗುತ್ತಿದ್ದಾಗ ಪೊಲೀಸರು ಕವಿತಾ ಲಂಕೇಶ್ ರನ್ನು ಬಂಧಿಸಿದ್ದಾರೆ.
Comments