ಜಯಂತಿ ಹೆಸರಿನಲ್ಲಿ ರಾಜಕೀಯ ಬಿಟ್ಟು ರೈತರ ಸಮಸ್ಯೆಗೆ ಸ್ಪಂದಿಸಿ

ರಾಜ್ಯದಲ್ಲಿ ಹನುಮ ಜಯಂತಿ ಆಚರಿಸಲು ಕಾಲಹರಣ ಮಾಡುವುದು ಸರಿಯಲ್ಲ ಇದನ್ನು ಬಿಟ್ಟು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು ಜಯಂತಿಗಳು ಆಗುವ ರೀತಿಯಲ್ಲಿ ಆಗುತ್ತವೆ ಇದರಲ್ಲಿ ರಾಜಕೀಯ ತೋರಿಸುವುದು ಸರಿಯಲ್ಲ ಎಂದು ಸೊರಬ ಶಾಸಕ ಮಧು ಬಂಗಾರಪ್ಪ ಹೇಳಿದರು.
ನಗರದ ಸತ್ಯಾಗಾರ್ಡನನಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಳ್ಳಾಗಿದ್ದ ಬೃಹತ್ ಪಕ್ಷ ಸೇರ್ಪಡೆ ಹಾಗೂ ಮನೆ-ಮನೆಗೆ ಕುಮಾರಣ್ಣ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿ, ಟಿಪ್ಪು ಜಯಂತಿ ಆಗುತ್ತವೆ. ಇದರಲ್ಲೂ ಮೂಗು ತೂರಿಸುವ ಕೆಲಸ ಸಂಸದರು ಬಿಡಬೇಕು. ಈಗಾಗಲೇ ದೇಶದಲ್ಲಿ ಬಿಜೆಪಿ ಪಕ್ಷದವರು ರೈತರಿಗೆ ವಂಚಿಸುವ ಕೆಲಸ ಮಾಡಿದ್ದಾರೆ. ಇವರಂತೆ ರಾಜ್ಯ ಕಾಂಗ್ರೆಸ್‌ನಲ್ಲೂ ವಂಚಿಸುವ ಕೆಲಸವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೋದಲ್ಲೆಲ್ಲಾ ಅಭಿವೃದ್ದಿ ಬಗ್ಗೆ ಮಾತನಾಡುತ್ತಾರೆ. ರಾಜ್ಯದ ಯಾವ ಕಡೆ ಹೋದರು. ಶೂನ್ಯ ಕೆಲಸವೇ ಕಾಣುತ್ತವೇ ಹೊರತು ಅಭಿವೃದ್ದಿ ಎಲ್ಲೂ ಕಾಣಲಿಲ್ಲ. ಹಿಂದಿನ ಕುಮಾರಸ್ವಾಮಿ ಸರ್ಕಾರದ ಯೋಜನೆಗಳು ಈಗಿನ ಸರಕಾರದ ಯೋಜನೆಗಳ ಉಪಯೋಗಗಳು ಅರ್ಥ ಮಾಡಿಕೊಳ್ಳಬೇಕು ಕುಮಾರಣ್ಣನವರ ಕಾಳಜಿ ಎಂದಿಗೂ ರೈತರು ಮರೆಯಬಾರದು ಎಂದರು.
Comments