ಮಂಡ್ಯದಲ್ಲಿ ‘ನಮ್ಮ ಅಪ್ಪಾಜಿ ಕ್ಯಾಂಟೀನ್’ ಪ್ರಾರಂಭ
ಮಂಡ್ಯದಲ್ಲಿ ಕ್ಯಾಂಟೀನ್ ರಾಜಕಾರಣ ಜೋರಾಗಿದೆ. ನಗರದಲ್ಲಿ ಎರಡು 'ನಮ್ಮ ಅಪ್ಪಾಜಿ ಕ್ಯಾಂಟೀನ್'ಗಳು ಆರಂಭವಾಗಿವೆ.ಮಂಡ್ಯ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಡಾ.ಕೃಷ್ಣ, ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರು ನಮ್ಮ ಅಪ್ಪಾಜಿ ಕ್ಯಾಂಟೀನ್ ಗಳಿಗೆ ಚಾಲನೆ ನೀಡಿದ್ದಾರೆ. ಈ ಮೂಲಕ ನಮ್ಮ ಅಪ್ಪಾಜಿ ಕ್ಯಾಂಟೀನ್ ಬೆಂಗಳೂರು ನಗರದ ಬಳಿಕ ಮಂಡ್ಯದಲ್ಲಿ ಪ್ರಾರಂಭಗೊಂಡಿದೆ.
ಮಹಾವೀರ ವೃತ್ತದಲ್ಲಿ ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾದ ಡಾ.ಕೃಷ್ಣ ಅವರು, ಹೊಸಹಳ್ಳಿ ವೃತ್ತದ ಬಳಿ ಎಂ.ಶ್ರೀನಿವಾಸ್ ಅವರು ನಮ್ಮ ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದ್ದಾರೆ.ಜೆಡಿಎಸ್ ನಾಯಕ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ಬೆಂಗಳೂರಿನಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್‌ಅನ್ನು ಮೊದಲು ಆರಂಭಿಸಿದ್ದರು. ಈ ಕ್ಯಾಂಟೀನ್ 100 ದಿನಗಳನ್ನು ಪೂರೈಸಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
Comments